ಕಾವ್ಯ ಸಂಗಾತಿ
ಸುಜಾತಾ ಪಾಟೀಲ ಸಂಖ
ನಡಿಯಬೇಕು ನಾ ಮುಂದೆ
ನಿಜದ ಅರಿವು ಕೊಟ್ಟ ತಾತ್ವಿಕ ಸ್ವರೂಪ, ಅವರಿಗಾಗಿ ಜೀವ,
ಕೊಟ್ಟಿರುವೆ ಹ್ರದಯದಲಿ ಮುಗಿಲೆತ್ತರದ ಗೌರವ
ನಡೆಯಬೇಕು ನಾ ಮುಂದೆ,
ಸಾಗಬೇಕು ನಾ ಮುಂದೆ.
ನಡೆಯಲಿ ನುಡಿಯಲಿ ಶರಣರ ಕಾಣುತ,
ಬಸವಾದಿ ಶರಣರ, ವಚನಗಳ ಅರಿತು ಆಚರಿಸುತ,
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಬಯಲು ನಿರಾಕಾರ ದೈವ ಸ್ಮರಣೆಯಲಿ,
ಎಲ್ಲೆಲ್ಲೂ ನಿನ್ನ ನಿಜ ರೂಪನೇ ಕಾಣುತಲಿ,
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಸತ್ಯ ಶುದ್ಧ ಕಾಯಕವನೆ ಪೂಜಿಸುತ,
ಕಾಯಕದ ತನ್ಮಯತೆಯಲಿ ಶಿವಯೋಗವ ಕಾಣುತ,
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಬಯಸಿ ಬಂದುದು, ಅಂಗ ಬೋಗ ಅನರ್ಪಿತ,
ಬಯಸದೇ ಬಂದುದು, ಲಿಂಗ, ಬೋಗವೆಂದರೆಯುತ
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಬಾರದು ಬಪ್ಪದು, ಬಪ್ಪುದು ತಪ್ಪದೆಂಬುದನರಿತು,
ಹಿಂದಿನದೆಲ್ಲವ ಮರೆತು, ಹೊಸತನದಲಿ ಬೆರೆತು;
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಯಾಗಿ,
ಹೊಗಳಿಕೆಗೆ ಹಿಗ್ಗದೆ, ಕುಗ್ಗದೆ ತೆಗಳಿಕೆಗಿ,
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಅಹಂಕಾರವ ತ್ಯಜಿಸಲು ಬೃತ್ಯಾಚಾರವನುಸರಿಸಿ,
ಎನಗಿಂತ ಕಿರಿಯರಿಲ್ಲ ಭಕ್ತರಿಗಿಂತ ಹಿರಿಯರಿಲ್ಲೆಂಬುದನನಸರಿಸಿ,
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಮನ ನಿರ್ಮನವಾಗಿ, ಬೆಳಗಿನೊಳಗಣ ಬೆಳಗಿನಲಿ,
ಬದುಕಿರುವಾಗಲೇ ಬಯಲಾಗುತ ಬಯಲಲಿ
ನಡೆಯಬೇಕು ನಾ ಮುಂದೆ, ಸಾಗಬೇಕು ನಾ ಮುಂದೆ.
ಸುಜಾತಾ ಪಾಟೀಲ ಸಂಖ