ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
‘ನಿನ್ನೊಲುಮೆ’
ನಿನ್ನೊಲುಮೆ ಪ್ರೀತಿಯಲಿ
ಜೀವ ಸ್ಫೂರ್ತಿ ಅರಳಿ
ಕಾವ್ಯವಾಯಿತು ಗೆಳತಿ
ಶಬ್ದ ಅಕ್ಷರದಿ
ನಿನ್ನ ಕಾಣುವ ನಿತ್ಯ ಬಯಕೆ
ಕಣ್ಣಿನಲ್ಲಿ ಚಿಗುರಿತು
ನಿನ್ನ ಮೋಹ ಮಾಯಾ ಶಕ್ತಿ
ನನ್ನ ಬದುಕಿನ ದಾರಿಯು
ನೀನು ಸುಂದರ ಭಾವ ಪ್ರೇಮ
ದೇವನೊಲುಮೇ ಕುಸುಮವು
ಸ್ನೇಹ ಸಾಗರ ಪಯಣ ಮುಕ್ತಿ
ನಿನ್ನ ನೆನಪು ಯುಕ್ತಿಯು
ನಾನು ನೀನು ನೀನು ನಾನು
ಕೂಡಿ ನಗುತ ಸಾಗಬೇಕು
ಅವನು ಹೆಣೆದ ಜೀವ ಬಲೆಯಲಿ
ಬಾಳ ಬಟ್ಟೆ ಕಾಣಬೇಕು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅವನು ಹೆಣೆದ ಜೀವ ಬಲೆಯಲಿ
ಬಾಳ ದಾರಿಯ ಕಾಣಬೇಕು…. ಎನ್ನುವ
ನಿನ್ನೊಲುಮೆ…. ಕವನ
ಸರಳ… ಸುಂದರ… ಅಭಿವ್ಯಕ್ತಿ
ಅದ್ಭುತ ಭಾವ ಕಿರಣ
ಸತ್ಯ, ಸುಂದರ, ಬದುಕಿನ ಪಯಣ
ಭಾವಪೂರ್ಣ ಕವಿತೆ
ಅದ್ಭುತ