ಡಾ.ಶಿವಕುಮಾರ್ ಮಾಲಿಪಾಟೀಲ ಯಾಕೋ ಸ್ವಾತಂತ್ರ್ಯ ಜಾಸ್ತಿ ಅಯಿತು ಅನಿಸುತ್ತೆ….

ಡಾ.ಶಿವಕುಮಾರ್ ಮಾಲಿಪಾಟೀಲ

ಯಾಕೋ ಸ್ವಾತಂತ್ರ್ಯ ಜಾಸ್ತಿ ಅಯಿತು ಅನಿಸುತ್ತೆ….

ಕಂಠ ಮಟ ಕುಡಿದು, ಮೂರು ಪಡ್ಡೆ ಹುಡುಗರು ಬೈಕ್ ರಾಂಗ್ ರೂಟ್ ಗೆ ಬಂದು ಪೋಲಿಸರಿಗೆ ಹೆದರಿಸುತ್ತಾರಂದರೆ ಯಾಕೋ ಸ್ವತಂತ್ರ ಜಾಸ್ತಿ ಆಯಿತು ಅನಿಸುತ್ತೆ..

ಸಿಕ್ಕಸಿಕ್ಕಲ್ಲಿ ಉಗುಳುತ , ಎಲ್ಲೆಂದರಲ್ಲಿ ಕುಂತು ಕುಡಿಯುತ,ಜನ
ರಸ್ತೆ  ಮೇಲೇನೆ ಕಸ ಚಲ್ಲತಾರಂದರೆ
ಯಾಕೋ ಸ್ವತಂತ್ರ ಜಾಸ್ತಿ ಆಯಿತು ಅನಿಸುತ್ತೆ

ಸಣ್ಣ ಸಣ್ಣ ಮಕ್ಕಳ ಮೇಲೆ ,ಅಪ್ರಾಪ್ತರ ಮೇಲೆ ಅತ್ಯಾಚಾರ , ಕೊಲೆ ಮಾಡಿ
ಬಿಸಾಡತಾರಂದರೆ ಯಾಕೋ ಸ್ವತಂತ್ರ ಜಾಸ್ತಿ ಆಯಿತು ಅನಿಸುತ್ತೆ

ಉಡಾಳ ಯುವಕ  ಅಕ್ರಮ ಕಲ್ಲು ಗಣಿಗಾರಿಕೆ ,ಮರಳು ದಂದೆ ,ಎಲ್ಲಾ ದೋ ನಂಬರ್   ಮಾಡಿ ಹರಾಮಿ
ರೊಕ್ಕ ಗಳಿಸಿ ಊರ ಅಧ್ಯಕ್ಷ ಆಗತಾನಂದರೆ  ಯಾಕೋ ಸ್ವಾತಂತ್ರ್ಯ ಜಾಸ್ತಿ ಆಯಿತು ಅನಿಸುತ್ತೆ..

ಸಂಬಳಕ್ಕಿಂತ ಹತ್ತು ಪಟ್ಟು ಗಿಂಬಳ ತಿಂದು , ಸರಕಾರಿ ಕೆಲಸನ ಬಿಟ್ಟಿ ಬ್ಯಾಸರ ಮಾಡುತ ಪ್ರಾಮಾಣಿಕ ಹಿರಿಯ ಅಧಿಕಾರಿನ ಹೆದರುಸ್ತಾನಂದರೆ ಯಾಕೋ ಸ್ವಾತಂತ್ರ್ಯ ಜಾಸ್ತಿ ಆಯಿತು ಅನಿಸುತ್ತೆ..

ದೇಶದ ಜನಸಂಖ್ಯೆ ನೂರಾರು ಕೋಟಿ ಇದ್ದರೂ ನಾಲ್ಕೈದು ಮಕ್ಕಳನ್ನು ಹಡೆದು
ಸರಕಾರ ಏನು ಮಾಡವಲ್ಲದು ಎಂದು ಬಾಯಿಗೆ ಬಂದಂಗ ಬೈತಾರಂದರ ಯಾಕೋ ಸ್ವಾತಂತ್ರ್ಯ ಜಾಸ್ತಿ ಆಯಿತು ಅನಿಸುತ್ತೆ..

ಇಪ್ಪತ್ತು ಕೋಟಿ ಖರ್ಚು ಮಾಡಿ ಗೆದ್ದು
ನಾಲ್ವತ್ತು ಕೋಟಿಗೆ ಇನ್ನೊಂದು ಪಕ್ಷಕ್ಕೆ ಹಾರಿ ,ಅಲ್ಲಿಯೂ ಮಂತ್ರಿ ಪದವಿ ಹೊಡಕೊಂಡು ಸರಕಾರ ನಡಗುಸ್ತಾರಂದರೆ ಯಾಕೋ ಸ್ವಾತಂತ್ರ್ಯ ಜಾಸ್ತಿ ಆಯಿತು ಅನಿಸುತ್ತೆ

ತಾವೇ ಇಷ್ಟ ಪಟ್ಟು ಮದುವೆ ಮಾಡಿಕೊಂಡು ಎರಡ್ಮೂರು ವರ್ಷಕ್ಕೆ ಸಂಸಾರ ಹೊಂದಿಕೆ ಆಗವಲ್ಲದು ಅಂತ ವಿಚ್ಛೇದನಕ್ಕೆ ಅರ್ಜಿ ಹಾಕತಾರಂದರ ಯಾಕೋ ಸ್ವಾತಂತ್ರ್ಯ ಜಾಸ್ತಿ ಆಯಿತು ಅನಿಸುತ್ತೆ..

ಸಮಾಜ ತಿದ್ದುವ ಬದಲು ಕೆಲ ಧರ್ಮ ಗುರುಗಳು
ತಮ್ಮ ಜಾತಿ ಜಾತ್ರೆ , ರಾಜಕಾರಣ ಮಾಡುತ ಐಷಾರಾಮಿ ಜೀವನ ನಡೆಸಿ ,ಸುಖದ ಸುಪ್ಪತ್ತಿಗೆಯಲ್ಲಿ  ಮುಳಿಗಿದ್ದಾರಂದರ ಯಾಕೋ ಸ್ವಾತಂತ್ರ್ಯ ಜಾಸ್ತಿ ಆಯಿತು ಅನಿಸುತ್ತೆ..

ಕೊಲೆ ,ಸುಲಿಗೆ ,ಅತ್ಯಾಚಾರ ಏನೇ ಮಾಡಲಿ ಜಾಮೀನು ಪಡೆದು ಸಮಾಜದಲ್ಲಿ ಗೌರವಯುತ ಜೀವನ ನಡೆಸುತ್ತಾರಂದರೆ ಯಾಕೋ ಸ್ವಾತಂತ್ರ್ಯ ಜಾಸ್ತಿ ಅನಿಸುತ್ತೆ..

ಹಿರಿಯರು ಪ್ರಾಣ ತ್ಯಾಗ ಮಾಡಿ ಗಳಿಸಿದ್ದನ್ನ ಪುಂಡ ಪುಡಾರಿಗಳ ,ಹೆಂಡದ ದೊರೆಗಳ,
ಬಂಡ ನಾಯಕರ  ಪಾಲಾಯ್ತು ಅಂತ ವ್ಯಥೆಯಾಗಿ ಯಾಕೋ ಸ್ವಾತಂತ್ರ್ಯ ಜಾಸ್ತಿಯಾಯ್ತು ಅನಿಸುತ್ತೆ

ಸದುಪಯೋಗದ ಸ್ವತಂತ್ರ
ಮೆರೆಯುವುದು ಗಣತಂತ್ರ

ಇದ ಮರೆತರೆ ಸಿದ್ದಲಿಂಗಯ್ಯ ಅವರು ಬರೆದ
“ಯಾರಿಗೂ ಬಂತು, ಎಲ್ಲಿಗೆ ಬಂತು೪೭ರ ಸ್ವಾತಂತ್ರ್ಯ*…?? ಹಾಡನ್ನು  ಹಾಡುತ್ತ ಇರಬೇಕಾಗುತ್ತೆ…


ಡಾ.ಶಿವಕುಮಾರ್ ಮಾಲಿಪಾಟೀಲ                   

2 thoughts on “ಡಾ.ಶಿವಕುಮಾರ್ ಮಾಲಿಪಾಟೀಲ ಯಾಕೋ ಸ್ವಾತಂತ್ರ್ಯ ಜಾಸ್ತಿ ಅಯಿತು ಅನಿಸುತ್ತೆ….

Leave a Reply

Back To Top