ಕೆ.ಶಶಿಕಾಂತ್ ಲಿಂಗಸೂಗೂರ ಮೂರು ಬಣ್ಣದ ಹಕ್ಕಿ

ಕಾವ್ಯ ಸಂಗಾತಿ

ಕೆ.ಶಶಿಕಾಂತ್ ಲಿಂಗಸೂಗೂರ

ಮೂರು ಬಣ್ಣದ ಹಕ್ಕಿ

ಬಾವುಟ ಹಾರುವ ಮುನ್ನ
ಡಿಂಡಿಮ ಮೊಳಗುವ ಮುನ್ನ
ಬೆಳಕು ಮೂಡುವ ಮುನ್ನ
ಹಗಲಿಗೆ ಹಾತೊರೆದ ಹಕ್ಕಿ
ಅಂಗ್ರೇಜಿ ಬಲೆಯ ಹರಿದು ಹಾಕಲು
ಹಸಿವು ನಿದ್ರೆ ಎನ್ನದೇ ಕಾಯುತಿತ್ತು.

ಕಾಲ ಓಡುತಿತ್ತು
ಚಕ್ರ ತಿರುಗುತಿತ್ತು
ಚರಕವಿಡಿದ ತಾತನ ಕೈ
ಎಳೆ ಎಳೆಯಾಗಿ ಆತ್ಮವ ನೂಲುತಿತ್ತು.

ಅಸಂಖ್ಯ ಗಂಟುಗಳ ಚಿಂದಿ ಸೀರೆಯ ಅವಳಿಗೆ
ಸರದಾರ,ಬಾಬಾ,ಚಾಚಾ, ಕೃಷ್ಣ
ಶಾಸ್ತ್ರಿ,ತಿಲಕ,ಭೋಸಾದಿ ಹೂಗಳ
ಪೀತಾಂಬರ ನೇಯುತಿತ್ತು.

ಹೊತ್ತು ಮೂಡುವ ಮುನ್ನ
ಕಾವಳ ಕರಗುವ ಮುನ್ನ
ಹೊನ್ನಿನ ಮಳೆಯು ಅಂಗಳಕೆ
ಥಳಿಯ ಹೊಡೆದಿತ್ತು
ಬಾಂದಳದ ಚುಕ್ಕೆಗಳೆಲ್ಲ
ಇಳೆಯ ಎದೆಯ ಮೇಲಿಳಿದು
ಬಾಳ ಕನಸಿಗೆ
ರಂಗೋಲಿಯ ರೂಪ ತಂದಿತ್ತು
ಹಕ್ಕಿಯ ಕಂಠವು ತುಂಬಿ
ನವಸುಪ್ರಭಾತವು ಹೊಮ್ಮಿ
ನವಬಾಳಿನ ತತ್ವದ
ತಂತಿಯ ಮೀಟಿತ್ತು

ಏರಿದ ಧ್ವಜವು ಇಳಿಯಬಾರದೆಂದು
ಇಳೆಯ ತುಂಬೆಲ್ಲಾ
ಹೊಳೆ ಹೊಳೆದು ಹಾರಬೇಕೆಂದು
ಬಿಸಿಲು ಚಳಿಗಳಿಗೆ ನಲುಗುವ
ಜೀವಕೋಟಿಯ ಮೈಗೆ
ಗಗನದೋಪಾದಿಯಲಿ
ಹೊದಿಕೆಯಾಗಬೇಕೆಂದು
ಬಾವುಟದ ನೀತಿಯನು ಸಾರುತಿತ್ತು

ಎಲ್ಲಿಯೂ ನಿಲ್ಲದಲೆ
ಅನಂತವೇ ತಾನಾಗಿ
ಅನವರತ ಸಂಚಾರದಲಿ ಲೋಕದಿ ಹಾರಿತ್ತು
ಅಟ್ಟಹಾಸದ ಸಂಕೋಲೆಯ
ಎದೆಗೆ ಬೆಂಕಿ ಇಟ್ಟಿತ್ತು

ಸಾರೇ ಜಹಾಂಸೇ ಅಚ್ಛಾ
ಹಿಂದೂಸ್ಥಾನ ಹಮಾರಾ ಹಮಾರಾ
ಎನ್ನುವ ಪಲ್ಲವಿಯು
ನೆಲದ ನಾಲಿಗೆಯಲಿ
ನಲಿನಲಿದಾಡುತಿತ್ತು.
—————————-


ಕೆ.ಶಶಿಕಾಂತಲಿಂಗಸೂಗೂರ.

3 thoughts on “ಕೆ.ಶಶಿಕಾಂತ್ ಲಿಂಗಸೂಗೂರ ಮೂರು ಬಣ್ಣದ ಹಕ್ಕಿ

  1. ಶ್ರೀಯುತ ಶಶಿಕಾಂತ ನಿಮ್ಮ ಕವಿತೆ ಚೆನ್ನಾಗಿದೆ. ಅಭಿನಂದನೆಗಳು. ಆಕಸ್ಮಿಕವಾಗಿ ನಾನೂ ಲಿಂಗಸುಗೂರಿನ ಮೂಲದವನು. ಈ ಸಂಗಾತಿ ಬರಹಗಾರರಲ್ಲಿ ಆನೂ ಒಬ್ಬನು ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಿಮಗೆ ಆಸಕ್ತಿ ಇದ್ದರೇ ನನ್ನ ವಾಟ್ಸಪ್ 9448595021 ಗೆ ಸಂಪರ್ಕಿಸಬಹುದು. ಶುಭ ಹಾರೈಕೆಗಳು.

  2. ಶ್ರೀಯುತ ಶಶಿಕಾಂತ ನಿಮ್ಮ ಕವಿತೆ ಚೆನ್ನಾಗಿದೆ. ಅಭಿನಂದನೆಗಳು. ಆಕಸ್ಮಿಕವಾಗಿ ನಾನೂ ಲಿಂಗಸುಗೂರಿನ ಮೂಲದವನು. ಈ ಸಂಗಾತಿ ಬರಹಗಾರರಲ್ಲಿ ನಾನೂ ಒಬ್ಬನು ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಿಮಗೆ ಆಸಕ್ತಿ ಇದ್ದರೇ ನನ್ನ ವಾಟ್ಸಪ್ 9448595021 ಗೆ ಸಂಪರ್ಕಿಸಬಹುದು. ಶುಭ ಹಾರೈಕೆಗಳು.

  3. ವೈಚಾರಿಕ ಕವನ ಸರ್, ಮತ್ತೆ ಮತ್ತೆ ಓದಬೇಕು ಅಂತ ಅನಿಸೋ ನುಡಿ ತೋರಣ

Leave a Reply

Back To Top