ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಸುಳ್ಳಿನ ಸಂತೆಯಲಿ ಭಾವನೆಗಳನೇ ಬಿಕರಿಗಿಡಲಾಗಿದೆ
ಮುಖವಾಡದ ಮನಸುಗಳನೂ ಹರಾಜಿಗಿಡಲಾಗಿದೆ
ಅದೇನು ಥಳುಕು , ಅದೇನು ಬಳುಕು !!
ಸೋಗಿನ ಮಾತುಗಳನು ಸಿಂಗರಿಸಿಡಲಾಗಿದೆ
ಇರದ ಆದರವು ಅಡಿಗಡಿಗೆ ಇಣುಕಿ ಮಿಣುಕುತಿದೆ
ಸೋತು ಸತ್ತ ಸ್ನೇಹವನು ತೋರಿಕೆಗಿಡಲಾಗಿದೆ
ಉಸಿರಿರದ ಅನುರಾಗಕ್ಕಂತೂ ಎಲ್ಲಿರದ ಶೃಂಗಾರ
ಮಡಿದ ಭಾವ ಮಸಣಕ್ಕೊಯದೇ ಪೇರಿಸಿಡಲಾಗಿದೆ
ಇದೆಂತಹ ಸಂತೆಯ, ಅವೆಂತಹ ಸರಕುಗಳು “ವಾಣಿ “,
ಮನಸನು ಕೊಲ್ಲುವ ಅಸ್ತ್ರಗಳನೇ ಆರಿಸಿಡಲಾಗಿದೆ
——————————
ವಾಣಿ ಯಡಹಳ್ಳಿಮಠ
ಚೆನ್ನಾಗಿ ಬರೆದಿರುವಿರಿ.
Thank you so much Sir
ಹೃದಯಸ್ಪರ್ಶಿ ಕವನವಾಗಿದೆ ಮೇಡಂ