ಡಾ ಅನ್ನಪೂರ್ಣ ಹಿರೇಮಠ-ಗೆಳೆತನ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗೆಳೆತನ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಅದೇಗೋ ಚಿರಪರಿಚಿತರಾಗಿ
ಚಿರಕಾಲ ಹಸಿರಾಗಿ ಉಸಿರಾಗಿ
ತಂಪು ಸೋಂಪು ನೀಡುತ ಉಳಿಯುವುದೇ ಸ್ನೇಹವು//

ಅರಳಿ ನಗುವ ಹೂವಿನಂದದಿ
ಬೆಳಕ ಕೊಡುವ ಸೂರ್ಯ ರಶ್ಮಿಯಂದದಿ
ಕೂಗೋ ಗಿಳಿ ಕೋಗಿಲೆ ಹ** ಇಂಚರ ದಂದದಿ
ಮುದ ನೀಡುತ ಮಧುರತೆಯ ಭಾವ
ಹೊಸೆದು ಬೆಸೆವುದೇ ಅಮರ ಸ್ನೇಹವು//

ಬಡತನ ಸಿರಿತರವನರಿಯದ
ಕೃಷ್ಣ ಸುಧಾಮರ ಪ್ರೀತಿಯಂತೆ
ಪರಮ ಭಕ್ತ ಬಾಲಾಜಿಗೊಲಿದ
ಮಗು ಮನದ ವಿಷ್ಣುವಿನ ಪ್ರೀತಿಯಂತೆ
ಜೀವ ಭಾವ ಬೆಸೆವ ಸಂಭವದುವೇ ಸ್ನೇಹವು//

ಸ್ವಾರ್ಥ ಕೀರ್ತಿಯ ನೆಚ್ಚಿ ಬೆಳೆಯದು
ಘನತೆ ಗೌರವಗಳ ಬೆನ್ನತ್ತಿ ಕೆಡದು
ದುರಾಸೆ ಮೋಸ ವಂಚನೆ ಬಳಿ ಸುಳಿಸದು
ಹದ ಮಣ್ಣಿಗೆ ಬಿದ್ದ ಕಾಳಂತೆ
ಕಡಲ ಚಿಪ್ಪಿಗೆ ಬಿದ್ದ ಸ್ವಾತಿ ಮಳೆ ಹನಿಯಂತೆ
ಹೊಳೆದು ಚಿಗುರಿ ಹೆಮ್ಮರವಾಗುವುದೇ ಸ್ನೇಹವು//

ಜೀವಕ್ಕೆ ಜೀವ ಕೊಡುವ ಕುಚಿಕು ಗೆಳೆತನ
ಪ್ರಾಣ ಲೆಕ್ಕಿಸದೆ ಕಾಪಾಡುವ ಗಟ್ಟಿ ಸಂಬಂಧ
ಅಂತರಾತ್ಮದ ಬೆಳಕಿನೊಳು ಬೆಳಗುವುದು
ಹೃದಯ ಮಂದಿರದೆ ಹಸಿರಾಗಿರುವುದು
ಒಡಲಾಳದಿ ಸದಾ ಮಿಡಿಯುತಿರುವುದು
ಬಣ್ಣಿಸಲಾಗದ ಪದಗಳಿಗೆ ನಿಲುಕದ
ಮೇರು ಸಂಭಂದವೇ ಗೆಳೆತನ//


ಡಾ ಅನ್ನಪೂರ್ಣ ಹಿರೇಮಠ

One thought on “ಡಾ ಅನ್ನಪೂರ್ಣ ಹಿರೇಮಠ-ಗೆಳೆತನ

Leave a Reply

Back To Top