ಇಂದಿರಾ ಮೋಟೆಬೆನ್ನೂರ ಕವಿತೆ-ಸದ್ದಾಗುವುದಿಲ್ಲ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸದ್ದಾಗುವುದಿಲ್ಲ

ಹೃದಯ ಒಡೆದಾಗ
ಸದ್ದಾಗುವುದಿಲ್ಲ..ನಿಜ
ಆದರೆ ನೋವಿನ ಬೆಂಕಿ
ಜ್ವಾಲೆಯ ಕಾವು..
ನಿನ್ನನ್ನೂ ಸುಡುವುದು..

ಅದರ ಧಗೆಗೆ ಹೊಗೆಗೆ
ಉಸಿರು ಕಟ್ಟುವುದು..
ಬೆಂದು ಬೂದಿಯಾಗಿ ಉಗಿಗೆ
ಹುಗಿದು ಮುಗಿದ
ಬರಡಾಗುವುದು ಬದುಕು..

ನಿಟ್ಟುಸಿರ ಕುಲುಮೆ..
ಕುದಿಯೆಸರ ಚಿಲುಮೆ
ಕರಗಿದ ನಮ್ಮೊಲುಮೆ..
ಮೃದು ಹೃದಯ
ಏಕಾಯಿತು ಕಾಠಿಣ್ಯದ ತವರು..

ಇರಿಯಲು ಮಾತಿನ
ಮೊನಚು ಸಾಕು..
ಕೊಲ್ಲಲು ಮೌನದ
ಚೂರಿಯೇ ಸಾಕು.
ದೂರ ಸರಿಸಲು
ಸುಳ್ಳು ನೆಪವೇ ಸಾಕು..


ಇಂದಿರಾ ಮೋಟೆಬೆನ್ನೂರ.

Leave a Reply

Back To Top