ಮೌಲ್ಯಗಳ ಜೀವನ ನಡೆಸೋಣ….ನಿಶ್ಚಿತ ಎಸ್.

ಕಾವ್ಯ ಸಂಗಾತಿ

ಮೌಲ್ಯಗಳ ಜೀವನ ನಡೆಸೋಣ….

ನಿಶ್ಚಿತ ಎಸ್.

ಇಂದು ನಾ ನಿಮ್ಮೊಡನೆ ಒಂದು ಅದ್ಭುತವಾದ ನನ್ನ ಜೀವನದ ಮೌಲ್ಯದ ಸಂದೇಶವನ್ನು ಹೇಳುತ್ತಿದ್ದೇನೆ …ನಾವು ಹೇಗೆಂದರೆ ನೆನಪಿನ ಪಯಣವನ್ನು ನೆನಪಿನ ವಸ್ತುಗಳನ್ನು ನೋಡಿ  ಮಾತ್ರವೇ ಖುಷಿ ಪಡುತ್ತಿದ್ದೇವೆ ,,,ಆದರೆ ಇಂದು ನಾ ಕಂಡ ಸನ್ನಿವೇಶ ನೆನಪಿಗಾಗಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಅದನ್ನು ನೆನಪೆಂದು ಖುಷಿ ಪಡುವುದಕ್ಕಿಂತ,, ನೆನಪುಗಳು ಕುಣಿದಾಡಿದಾಗಲೇ,,, ಆ ನೆನಪಿನ ಸಂತೋಷ ಹೆಚ್ಚಿನ ಆನಂದವನ್ನು ಉಂಟುಮಾಡುತ್ತದೆ ಎಂದು ತಿಳಿದಿದ್ದು….

 ಈ ದಿನ  ನಡೆದ ಆ ಪ್ರಸಂಗವೇನೆಂದರೆ ..ನಾನು ನನ್ನ ಸೈಕಲನ್ನು ಈಗ ಓಡಿಸದಿದ್ದರೂ ನೆನಪಿಗಾಗಿ ಅದನ್ನು ಮೂಲೆಯಲ್ಲಿ ಇಟ್ಟಿರುವೆ,, ಆ ಸೈಕಲ್ ನ್ನು ನೋಡಿದಾಗ ನನ್ನ ಹಳೆಯ ಮಧುರವಾದ ನೆನಪುಗಳು ನನ್ನ ಕಣ್ಣಿಗೆ ಬಂದಂತೆ ಬಾಸವಾಗುತ್ತದೆ.. ಹಳೆಯ ನೆನಪುಗಳೆಲ್ಲ ಆನಂದಮಯವಾಗಿ ಮರುಕಳಿಸುತ್ತದೆ.. ನಾನು ನನ್ನ ಸ್ನೇಹಿತರೊಡನೆ ಸೈಕಲಲ್ಲಿ ರಥವೆನ್ನುವ ರೀತಿ ಸವಾರಿ ಮಾಡುತ್ತಿದ್ದದ್ದು,,  ಸೈಕಲ್ಲಿನ ಮೇಲೆ ಬರೆದಿದ್ದ ನಮ್ಮ ಹೆಸರನ್ನು ಹುಡುಗರು ಕೂಗಿ ಕರೆಯುತ್ತಿದ್ದಿದ್ದು, ಎಲ್ಲವನ್ನು ನೆನೆಸುತ್ತಾ ಸುಮ್ಮನೆ ಮುಗುಳ್ನಗೆ ಬೀರುತ್ತಾ ಕುಳಿತಿರುತ್ತಿದ್ದೆ.. ಆದರೆ ಈ ದಿನ  ಯಾರೋ ಒಬ್ಬ ಹುಡುಗ ಅವನ ಬಳಿ ಸೈಕಲ್ ಇರದ ಕಾರಣ ಇನ್ನೊಬ್ಬ ಹುಡುಗನ ಬಳಿ ನನಗೆ ಒಂದು ರೌಂಡ್ ಕೊಡು ಎಂದು ಕೇಳಿದ ಅವನು ಕೊಡಲಿಲ್ಲ ಅವರ ಅಮ್ಮನೂ ಕೂಡ ಚೆನ್ನಾಗಿ ಅವನನ್ನು ಬೈದರು,, ಆಗ ನನ್ನಲ್ಲಿ ಮೂಡಿದ ಭಾವನೆ ,,ಈ ನನ್ನ ನೆನಪಿನ ಸೈಕಲ್ ಬರಿ ಮೂಲೆಯಲ್ಲೇ ಇರುವುದಕ್ಕಿಂತ ಅದು ಒಬ್ಬ ಸವಾರನ ಮೇಲೆ ಒಬ್ಬ ಸವಾರನ ಜೊತೆ ಇದ್ದರೆ ಚೆನ್ನಾಗಿರುತ್ತೆ ಅಲ್ಲವಾ ಎಂದು … ನಾವು ನಮ್ಮ ನೆನಪುಗಳನ್ನ ಮನೆಯಲ್ಲಿ ಕೂಡಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ಆ ನೆನಪಿನ ಖುಷಿಯನ್ನು ಇನ್ನಷ್ಟು ದೀರ್ಘವಾಗಿ ಹರಡಿಸುವುದೇ ಮುಖ್ಯ ಎಂಬ ಭಾವನೆ ಈ ದಿನ ನನಗೆ ಆ ಬಾಲಕನಿಂದ ತಿಳಿದು ಬಂದಿತು.. ಈ ರೀತಿಯ ಅನೇಕ ಸನ್ನಿವೇಶಗಳು ನಮ್ಮ ನಿಮ್ಮ ಕಣ್ಣ ಮುಂದೆ ಬರುತ್ತದೆ ಆಗ ನೀವು ನಾವು ಎಲ್ಲರೂ ಸ್ವಾರ್ಥದ ನೆನಪಿನ ಜೀವನಕ್ಕಿಂತ ಮೌಲ್ಯದ ಜೀವನವನ್ನು ಬೆಳೆಸಿಕೊಳ್ಳೋಣ..

ಇದೇ ರೀತಿ ನಾವು ಮನೆಯಲ್ಲಿ ಬಳಸುವ ಮಿಕ್ಸಿ ,ಗ್ರೈಂಡರ್ , ಕುಕ್ಕರ್, ಗ್ಯಾಸ್ ,ಎಲ್ಲವೂ ಚೆನ್ನಾಗಿದ್ದರೂ ಈಗಿನ ಕಾಲದ ವಸ್ತುಗಳನ್ನು ಹೊಸದಾಗಿ ಕೊಂಡುಕೊಂಡಾಗ ಹಳೆ ವಸ್ತುಗಳನ್ನು ಕೂಡ ಮೂಲೆಯಲ್ಲಿ ಇಡುತ್ತಿದ್ದೇವೆ ಅದರ ಬದಲು ಎಷ್ಟೋ ಜನರ ಬಳಿ ಆ  ವಸ್ತುಗಳನ್ನು ಕೊಳ್ಳುವ ಶಕ್ತಿ ಇರದಿರುವ ಕಾರಣ.. ಅವರು ಇನ್ನೂ ಹಳೆಯ ಪದ್ದತಿಯನ್ನು ಬಳಸುತ್ತಿದ್ದಾರೆ.. ಅಂತಹ ವ್ಯಕ್ತಿಗಳಿಗೆ ನಾವು ಅದನ್ನು ನೀಡಿದರೆ ಆಗ ಆ ವಸ್ತುಗಳಿಗೆ ಇನ್ನೂ ಹೆಚ್ಚಿನ ಬೆಲೆ ಸಿಗುತ್ತದೆ, ಹಾಗೂ ಅದು ಒಬ್ಬರ ಬದುಕಿಗೆ ಆಶ್ರಯವಾಗುತ್ತದೆ.. ನಾವು ಅದನ್ನು ಮೂಲೆಯಲ್ಲಿ  ಇಟ್ಟರೂ ಕೂಡ ಅದು ಸ್ವಲ್ಪ ದಿನಗಳ ನಂತರ ಸರಿಯಾಗಿ ಕೆಲಸ  ಮಾಡುವುದಿಲ್ಲ,  ಅದರ ಬದಲು ಅದನ್ನ ಉಪಯೋಗ ಮಾಡುವವರಿಗೆ ಕೊಟ್ಟರೆ ಅದಕ್ಕೂ ಕೂಡ ಬೆಲೆ ಇದೆ ಹಾಗೂ ಅವರಿಗೂ ಕೂಡ ಅದು ತುಂಬಾ ಉಪಕಾರವಾಗುತ್ತದೆ ಅಲ್ಲವಾ ,ನಿಜ ಇದನ್ನು ನಾವು ನಮ್ಮ ನಿಮ್ಮ ಮನೆಯಲ್ಲಿ ಹೊಸತನಕ್ಕೆ ಹಳೆ ವಸ್ತುಗಳನ್ನು ಮೊಲೆಯಲ್ಲಿ ಇಟ್ಟಿರುತ್ತೇವೆ ಅಲ್ಲವೇ??? ನೋಡಿ ಒಮ್ಮೆ ಯೋಚಿಸಿ,, ಈ ರೀತಿಯಾಗಿ ಆ ವಸ್ತುಗಳಿಗೆ ಬೆಲೆ ನೀಡಿ.. ಆ ವಸ್ತುವಿಗಿಂತ ಹೆಚ್ಚಾಗಿ ಅದನ್ನ ಬಳಸುವರ ಬದುಕಿಗೆ ನಾವು ಆಶ್ರಯವಾಗುವುದು.. ನಮಗೂ ನಿಮಗೂ ಪುಣ್ಯ ಬರುವುದು ..

ಹೀಗೆ ,..
ನಾ ಕಂಡ ಇನ್ನೊಂದು ಅದ್ಭುತವಾದ ದೃಶ್ಯವೇನೆಂದರೆ ಒಮ್ಮೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾನು ಕಿವಿಗೆ ಇಯರ್ ಫೋನ್ ಹಾಕಿಕೊಂಡು ಒಂದು ಸಿನಿಮಾವನ್ನು ನೋಡುತ್ತಿದ್ದೆ ನನ್ನ ಪಕ್ಕ ಒಂದು ಆಂಟಿ ಕುಳಿತಿದ್ದರು ಅವರು ನಾ ನೋಡುತ್ತಿದ್ದ ಒಂದು ಸೀರಿಯಲ್ ಅನ್ನು ಅವರು  ಬಗ್ಗಿ ಬಗ್ಗಿ ನೋಡುತ್ತಿದ್ದರು,, ಆದರೆ ಅವರಿಗೆ ಅದರ ಶಬ್ದ ಕೇಳುತ್ತಿರಲಿಲ್ಲ  ಇವಳ ಇಯರ್ ಫೋನ್ ಅನ್ನು ನನಗೂ ಒಂದು ಕೊಟ್ಟರೆ ಚೆನ್ನಾಗಿರುತ್ತದೆ ಎಂಬ ಭಾವನೆ ಅವರ ಮನಸ್ಸಿನಲ್ಲಿತ್ತು ಎಂಬ ಭಾವನೆ ನನ್ನಲ್ಲಿ ಮೂಡಿತು.. ಅವರು ಅಷ್ಟು ಕುತೂಹಲದಿಂದ ನೋಡುತ್ತಿದ್ದರು …ಆಗ,, ನಾ ಸುಮ್ಮನೆ ಅವರನ್ನು ನೀವು ನೋಡುತ್ತೀರಾ ಎಂದು ಒಂದು ಇಯರ್ ಫೋನ್ ಅನ್ನು ತೆಗೆದು ಅವರಿಗೆ ಕೊಟ್ಟಾಗ ಅವರು ತುಂಬಾ ಸಂತೋಷದಿಂದ ತೆಗೆದುಕೊಂಡರು.. ಹೀಗೆ ಇಬ್ಬರು ಕೂಡ ಒಟ್ಟಿಗೆ ಸೀರಿಯಲ್ ನೋಡಿ,, ಹಾಗೆ ಮಾತುಕತೆ ಆಡಿ, ಒಂದು ಬಾಂಧವ್ಯ ಬೆಳೆಯಿತು..
 ಅಂದರೆ ಎಲ್ಲರ ಜೊತೆ ನಾವು ಈ ರೀತಿಯ ಭಾವನೆಯನ್ನು ಬೆಳೆಸಲು ಸಾಧ್ಯವಿಲ್ಲ,, ಆದರೆ ಕೆಲವರ ಜೊತೆ ನಾವು ಈ ರೀತಿಯ ಮೌಲ್ಯದ ವಿಷಯಗಳನ್ನು ಬೆಳೆಸಿಕೊಂಡಾಗ ಇದು ಅದ್ಭುತವಾಗಿ ನಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತದೆ,, ಇದೇ ರೀತಿ ಹಲವಾರು ಉದಾಹರಣೆಗಳು  ನಮ್ಮ ನಿಮ್ಮ ಕಣ್ಣ ಮುಂದೆ ಬಂದರೂ,, ನಾವು ಅದನ್ನು ಗಮನಿಸದೆ ನಿರ್ಲಕ್ಷಿಸಿ ಹೋಗುತ್ತೇವೆ ,,ಅದನ್ನ ನಾವು ಮನದಾಳದಿಂದ ಗಮನಿಸಿದಾಗಲೇ ನಮ್ಮ ಜೀವನ ಮೌಲ್ಯದಿಂದ ತುಂಬಿಕೊಳ್ಳುವುದು,,

 ಸಣ್ಣಪುಟ್ಟ ವಿಷಯಕ್ಕೆ ತುಂಬಾ ಜನರು ಅವರ ಅದ್ಭುತವಾದ ಸ್ನೇಹ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದಾರೆ,, ಯಾಕೋ ಈ  ಕಾಲದಲ್ಲಂತೂ ಹಣಕ್ಕೆ ಸ್ವಲ್ಪ ಬೆಲೆ ಕೊಡುವವರು ಹೆಚ್ಚಾಗಿರಬಹುದು,, ಆದರೂ ಗುಣಕ್ಕೂ ಬೆಲೆ ಕೊಡುವವರು ಕೂಡ ಖಂಡಿತ ಇದ್ದಾರೆ , ಹಾಗೆ ನೀವೇ ಸೋಲನ್ನು ಸ್ವೀಕರಿಸಿ ಮತ್ತೆ ಅವರನ್ನು ಒಮ್ಮೆ ಮಾತನಾಡಿಸಿ, ಅವರು ಮಾತನ್ನು ಮುಂದುವರಿಸುವವರಾದರೆ ನೀವು ಮುಂದುವರಿಸಿ ,ಇಲ್ಲವಾ ,ಬಿಟ್ಟೆ ಬಿಡಿ,, ಯಾಕೆಂದರೆ ಬದುಕಿನಲ್ಲಿ ಎಲ್ಲರಿಗೂ ಸ್ವಾಭಿಮಾನವು ಇರಲೇಬೇಕು ,,ಪೂರ್ತಿಯಾಗಿ ನಾವು ನಮ್ಮ ಸ್ವಾಭಿಮಾನ, ನಮ್ಮ ತನವನ್ನು, ಯಾರಿಗೂ ಅಷ್ಟು ಸುಲಭವಾಗಿ ಬಿಟ್ಟುಕೊಡಬಾರದು,, ಏಕೆಂದರೆ  ನೀತಿ ಹೇಳುವುದಕ್ಕೆ ಮಾತ್ರ ನಮ್ಮ ಆಚರಣೆಗೆ ಇಲ್ಲ ಎಂಬ ಗಾದೆಯಂತೆ ನಮಗೂ ಅನ್ವಯಿಸುವುದು ,, ಅದೇ ರೀತಿ ನಾವು ಕೂಡ ಕೆಲವರ ಜೊತೆ ತಗ್ಗಿ ಬಗ್ಗಿ ನಡೆದುಕೊಳ್ಳಬೇಕು ಆದರೆ ಅದು ಎಲ್ಲರ ಜೊತೆ ಸಾಧ್ಯವಿಲ್ಲ, ಅವರಗೆ ಮಾತು ಬಿಟ್ಟ ಎಲ್ಲರನ್ನೂ ನಾವು ನೀವು ಮಾತಾಡಿಸಲು ಸಾಧ್ಯವಿಲ್ಲ.. ಆದರೂ ಯಾರೋ ತಪ್ಪು  ಮಾಡಿದ ಒಬ್ಬರು, ಇಬ್ಬರನ್ನು ಕೂಡ ಕಳೆದುಕೊಳ್ಳಬಹುದು, ವಿನಹ ಸಂಬಂಧಗಳಲ್ಲಿ ಇರುವ ಎಲ್ಲರನ್ನೂ ಕಳೆದುಕೊಳ್ಳುವುದು ತಪ್ಪು..
 ಬದುಕು ಇರುವುದು ನಾಲ್ಕು ದಿನ,,  ಬದುಕನ್ನು ಒಳ್ಳೆ ರೀತಿ ಬದುಕೋಣ..
 ಈ ರೀತಿಯಾಗಿ ನಾವು ನೀವು ಎಲ್ಲರೂ ಮೌಲ್ಯದ ಜೀವನವನ್ನು ರೂಢಿಸಿಕೊಳ್ಳೋಣ,,,, ಬೆಳೆಸಿಕೊಳ್ಳೋಣ,,, ಬೆಳೆಸಲು ಪ್ರಯತ್ನ ಪಡೋಣ… ಧನ್ಯವಾದಗಳು.


ನಿಶ್ಚಿತ .ಎಸ್

Leave a Reply

Back To Top