ಆಶಾ ಯಮಕನಮರಡಿಯವರ-ಭಾವಗೀತೆ

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ಭಾವಗೀತೆ

ಮೌನರಾಗ ನುಡಿಸಿದೆ ಮನ
ಭಾವವೀಣೆಯ ತಂತಿ ಮೀಟಿ
ಹೃದಯ ಗೀತೆ ಹಾಡಬಯಸಿದೆ
ಮಧುರ ಒಲವಿನ ತಾಳಕೆ

ಸಪ್ತಸ್ವರಗಳ ಝೇಂಕಾರ ನಾದಕೆ
ಬೆರೆತ ಮನಗಳವು ತಲೆದೂಗಲಿ
ಎತ್ತ ಕೇಳಿದರತ್ತ ಪ್ರೀತಿ ಗಾನವೆ ಮೊಳಗಲಿ
ಚಿತ್ತಭಿತ್ತಿಯಲಿ ಒಲವದು ಅಚ್ಚೊತ್ತಲಿ

ಹೇಳಬೇಕಿದೆ ನೂರು ಮಾತನು
ಹೇಗೆ ಹೇಳಲಿ ತಿಳಿಯದಾಗಿದೆ
ಕಣ್ಣ ಕನ್ನಡಿಲೊಮ್ಮೆ ನೋಡು
ಮನದ ಬಿಂಬ ಕಾಣುತಿದೆ

ಮಂದಗಾಳಿಯು ಬಂದು ಹೇಳಿದೆ
ನನ್ನದೆ ಧ್ಯಾನ ನಿನಗೆಂದು ಸತ್ಯ
ನುಡಿಯಲಾಗದ ನುಡಿಗಳನೆಲ್ಲಾ
ನುಡಿಸುತಿರುವೆ ಭಾವ ವೀಣೆಯ ಮೀಟಿ


ಆಶಾ ಯಮಕನಮರಡಿ

Leave a Reply

Back To Top