ಇಮಾಮ್ ಮದ್ಗಾರ ಕವಿತೆ-ನಿನ್ನ ಸನಿಹ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ನಿನ್ನ ಸನಿಹ

ನಿನ್ನ ಸ್ಪರ್ಶ ಮೊದಲಿಗಿಂತ
ಹಿತ ವಾಗಿದೆ
ದೇಹ ದಾಲಸ್ಯ ರೋಗ
ದೊಂದಿಗೆ ದೂರಾಯಿತು
ನೋಡು !

ಮಾತು ಮೌನಗಳ
ಹೊಸಲು ದಾಟಿದ ನೆನಪುಗಳ..ಮಾತೇಕೆ ?
ಮತ್ತೆ ಹತ್ತಿರ ಬಂದು

ನಾಕದಲ್ಲಾಗಲಿ
ನರಕದಲ್ಲಾಗಲಿ ನೀನೀರದೇ
ಬದುಕುವದು ಹೇಗೇಂಬೆನ್ನ ಪ್ರಶ್ನೆಗೆ ಉತ್ತರ ಕೊಟ್ಟಿರುವೆ
ಹತ್ತಿರ ಬಂದು ಮೆತ್ತಗೆ ತಬ್ಬಿ

ಹಂಬಲಿ ಸುವ ಶತಮಾನಗಳ ಮನದಾಸೆ
ಕಂಬನಿಯ ಕಣ್ಣುಗಳ ಕನಸು
ನನಸಾಯಿತು ಇಂದು !

ದೂರವಾಯಿತು
ಮರಣ ಶಯ್ಯೆ..
ನಾಕವೂ ನಾಕೇ ಗೇಣು
ನನಗೆ ನೀನಿಷ್ಟು ಸನಿಹ ವಿದ್ದರೆ..

ಕ್ಷಮಿಸಿಕೊಂಡು
ಬಿಡೋಣ ನಮ್ನಮ್ಮ
ತಪ್ಪೊಪ್ಪುಗಳ !!
ಮತ್ತೆ ದೂರಾಗುವ
ಕನಸೂ ಬೇಡ !!

———————————-

ಇಮಾಮ್ ಮದ್ಗಾರ

Leave a Reply

Back To Top