ಕಾವ್ಯ ಸಂಗಾತಿ
ರಾಹುಲ ಮರಳಿ
ಗಜಲ್


ಬದುಕಿನ್ಯಾಗ ಅಂದ ಅನಸ್ಕೊಂಡು ಛಂದಗೇಡಿ ಆಗಿದ ದೋಸ್ತಿ ಬೇಕೆ
ಖರೆ ಗೆಳ್ಯಾರು ಜೀವನದಾಗ ಸ್ವಂತ ಗಳಿಸಿದ ಆಸ್ತಿ ಬೇಕೆ
ಮಿಜಿ ಮಿಜಿ ಮಾಡ್ಕೋತ್ ಹಿಂದ ಮಾತಾಡು ಮಂದಿ ಇದ್ದಾರ
ಮುಲಾಜಿಲ್ದೆ ಮಾರಿ ಮ್ಯಾಲೆ ಧ್ವನಿ ಏರಿಸಿದ ಶಕ್ತಿ ಬೇಕೆ
ಯಾವಾಗ ಬೀಳತಾನ ಇವ ಅಂತ ಖೆಡ್ಡಾ ತೋಡೋರು ಇರೋರ
ಗೆಳ್ಯಾನ ಮರ್ಯಾದಿ ಹೋಗದಂಗ್ ಕಾಪಾಡಿದ ಯುಕ್ತಿ ಬೇಕೆ
ಜೀವನ ಪರ್ಯಂತ ಎಷ್ಟ ಗಳಿಸಿದ್ರೂ ಸಮಾಧಾನ ಆಗುದಿಲ್ಲ
ಮಿತ್ರರ ಜೊತೆ ಹರಟುತ ಖುಷಿಯಿಂದ ಬದುಕಿದ ಭುಕ್ತಿ ಬೇಕೆ
ಇಬ್ಬರ ನಡಕ ತಂದಿಟ್ಟು ಖುಷಿ ಪಡು ಜಗತ್ನ್ಯಾಗ ಇದ್ದೇವು ಜೀವಕವಿ
ದೋಸ್ತಿದಾಗ ಸ್ನೇಹಿತರು ಸುಧಾಮ-ಕೃಷ್ಣ ಲೋಕಕ್ಕ ತೋರಿಸಿದ ಭಕ್ತಿ ಬೇಕೆ
ರಾಹುಲ ಮರಳಿ
