ಲತಾ ಧರಣೇಶ್ ಕವಿತೆ ಸಾಕ್ಷಿ

ಕಾವ್ಯ ಸಂಗಾತಿ

ಲತಾ ಧರಣೇಶ್

ಸಾಕ್ಷಿ

ಮುಗಿಲೇ ತೂತಾಗಿ ಸುರಿಯುತ್ತಿದೆ
ಗುಡಿಸಲ ಮನೆಗೆ ಕಟ್ಟಿದ ಹೊದಿಕೆಯು
ಮಳೆನೀರು ಜೊತೆಗೂಡಿ ತೊಟ್ಟಿಕ್ಕುತಿದೆ
ಕೆಸರೊಳು ಉಸಿರಿನಾ ನಿರಾಶ್ರಿತರು//

ಬದುಕಿನ ಬವಣೆ ದೂರದ ತೀರ ಕಾಣದ ಮಹಲು ಕಂಡಿಯ ಕನಸು
ಮಾಯದ ಮಳೆಯಲಿ ಬದುಕಿನ ಸಮರ
ಹುಟ್ಟು ಬಟ್ಟೆ ತಬ್ಬಲಿ ಮನ //

ನೆಲ- ನೆಲೆ ಜಲದ ಕಣ್ಣು
ಕಟ್ಟಿದ ಮನೆಯು ಕ್ಷಣದಲಿ ಕುಸಿದಿದೆ
ಮಳೆಯ ಆಟಕ್ಕೆ ಬದುಕೇ ಮಣ್ಣು
ಕಸಿದಿದೆ ಒಡಲಿನ ನೆಮ್ಮದಿಯ//

ಆಶ್ರಯ ಬಯಸಿ ನರಳಿದೆ ಜೀವವು
ನಿಲ್ಲಿಸು ಮಳೆಯೇ ರೌದ್ರಾವತಾರ
ಬದುಕಿನ ಚಿತ್ರಣ ನೋವಿನ ತಾಣವು
ಉಳಿದಿಲ್ಲವೆನೂ ನಮ್ಮಯ ಸಾಕ್ಷಿ//


ಲತಾ ಧರಣೇಶ್

Leave a Reply

Back To Top