ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಝಲ್
ನೇಸರನ ಅಸ್ತಮಾನದಿ ಹೊಂಬಣ್ಣದ
ರಂಗು ಮೂಡಿದೆ
ಬೇಸರದ ಮೊಗದಿ ಬಿಳಿಯ ಹಕ್ಕಿಗಳು
ಕತ್ತೆತ್ತಿ ನೋಡಿದೆ
ಆಕಾಶದಿ ಬೆಳ್ಳಿಮೋಡಗಳ ಸಾಲುಗಳು
ಪ್ರೇಮ ಸಂದೇಶವನು ಒಯ್ಯುವುದೇ
ಸಾಕಾದ ಕಾಗೆಗಳು ಅವಸರದಿ ಗೂಡ
ಸೇರಲು ಓಡಿದೆ
ನಿಂತಿರುವ ನೆಲವು ಬಿರುಕು ಬಿಟ್ಟಿರಲು
ನೆಲೆಯಿಲ್ಲದ ಚಿಂತೆಯ
ಸ್ವತಂತ್ರ ಜೀವನದ ಕಟ್ಟುವಲ್ಲಿ ಸೋತು
ಮೊಗವು ಬಾಡಿದೆ
ಕತ್ತಲೆಯ ಸಮಯದಿ ಜೊತೆಯಾಗಿರೆ
ಏನೋ ಹೇಳುವ ಕಾತರ ಕಂಗಳಲಿ
ಸುತ್ತ ಮುತ್ತ ಇರುವ ಜನರಲಿ ತುತ್ತಿಗಾಗಿ
ಹಂಬಲಿಸಿ ಬೇಡಿದೆ
ಬದುಕಿನ ಕರೆಗೆ ಸ್ಪಂದಿಸುವ ಜೀವಿಗಳಲಿ
ರಾಧೆಗೆ ಕನಿಕರವಿದೆ
ಹದ್ದಿನಂತೆ ಕುಕ್ಕುವ ಮಾತುಗಳು ಮನದಿ
ನೋವಾಗಿ ಕಾಡಿದೆ
ಅನುರಾಧಾ ರಾಜೀವ್ ಸುರತ್ಕಲ್
Super