ಜಯದೇವಿ.ಆರ್ ಯದಲಾಪೂರೆ-ಮರಣ ಮೃದಂಗ

ಕಾವ್ಯ ಸಂಗಾತಿ

ಜಯದೇವಿ.ಆರ್ ಯದಲಾಪೂರೆ

ಮರಣ ಮೃದಂಗ

ಕಾಣದ ಮಾಯೆಯಾಗಿ
ಕಾಡಿತ್ತು ಕೊರೋನಾ
ಬೆಂಬಿಡದ ಬೇತಾಳವಾಗಿ
ನೆಲದಗಲ ನಡುಗಿಸಿತು

ಹಿರಿಕಿರಿಯ ಬಡವಸಿರಿವಂತರೆನ್ನದೆ
ಒಬ್ಬರಿಂದೊಬ್ಬರಿಗೆ ಅಂಟಿಕೊಳ್ಳುತ್ತ
ರಕ್ತ ಬೀಜಾಸುರನಾಗಿ
ಉರಳಿಸಿತ್ತೋ ಹೆಣ

ಶವಗಳ ರಾಶಿಯಲ್ಲಿ ನೆಲ ಕಾಣದಾಗಿ
ಉಸಿರಾಡಲು ಪರದಾಡುತ್ತಿದ್ದರು ಜನ
ಔಷಧ ಉಪಚಾರಕ್ಕೆ

ತನ್ನವರ ಮಧ್ಯದಲ್ಲಿದ್ದರು
ಪರದೇಶಿಯೋಗಿತ್ತು
ಉಸಿರಿರದ ಜೀವ
ಜೆಸಿಬಿಯೇ ಮಸಣಕ್ಕೆ ಆಧಾರವಾಗಿತ್ತು

ಕೆಲಸವಿಲ್ಲದೆ ಕಾರ್ಮಿಕರ
ತುತ್ತು ಅನ್ನಕ್ಕಾಗಿ ಪರದಾಡಿದರು

ಗಂಜಿ ಇರದೆ
ಸತ್ತರು ನನ್ನವರು
ಸತ್ತವರ ಹೆಸರಲ್ಲಿ
ಕೋಟಿ ನುಂಗಿತು ಸರ್ಕಾರ

ಯಾವ ಪಾಪದ ಫಲ
ಕಾಡಿತ್ತು ಕೊರೋನಾ
ಮತ್ತೆ ಈ ದುಸ್ಥಿತಿ ಬಾರದಿರಲು
ಬೇಡಿಕೊಂಡಿತು ಜನ


ಜಯದೇವಿ.ಆರ್ ಯದಲಾಪೂರೆ

2 thoughts on “ಜಯದೇವಿ.ಆರ್ ಯದಲಾಪೂರೆ-ಮರಣ ಮೃದಂಗ

  1. ಮನಮುಟ್ಟುವ ,ತಟ್ಟುವ ಕವನ ಆರ್ದತೆಯಿಂದ ಮೂಡಿಬಂದಿದೆ ಜಯಾ,ಅಭಿನಂದನೆಗಳು.

Leave a Reply

Back To Top