ಕಾವ್ಯ ಸಂಗಾತಿ
ಈರಮ್ಮ. ಪಿ.ಕುಂದಗೋಳ
ಸ್ನೇಹ ಸೇತುವೆ
ಬಾಲ್ಯದ ಸವಿಯನ್ನು ಉಂಡು ಬೆಳೆದ
ಬಾಲ್ಯದ ಗೆಳತಿಯೇ ಬಾಳು ಬೇಸರವಾಯಿತೆ
ಒಂದು ಮಾತಾಡದೆ ಏನು ಹೇಳದೆ ಮೌನಿಯಾದೆ ಯಾಕೆ!!(೧)
ಮರೆತನೆಂದರು ಮರೆಯಲಿ ಹ್ಯಾಂಗ
ಕೂಡಿ ಆಡಿದ ನೆನಪು ಮರಳಿ ಬರುತಿದೆ ಹಂಗ
ಆಡಂಬರದ ಜಂಬದ ನೆಪದಲ್ಲಿ ಮರೆಮಾಚಿರುವೆ ಯಾಕೆ!(೨)
ಹೊಗಳಿಕೆಯೊಂದೇ ಸಾಲದು ತಗಳಿಕೆಯು ಬೇಕು
ಸಮಪಾಲಿನ ಬುತ್ತಿ ಸವಿದರೇನೆ ಜೀವನ ತೃಪ್ತಿ
ನಿನ್ನಿಷ್ಟದ ಕುದುರೆಯನ್ನೆರಿ ಓಡುತ್ತಿರುವೆ,
ಆಸೆಯೆ ದು:ಖಕ್ಕೆ ಮೂಲ ಮರೆತೆಯ ಅಂತ ಅಹ0 ಯಾಕೆ! (೩)
ಕೊಂಚ ಕೋಪ ಇರಲಿ ಮುನಿಸು ಬೇಡ ಸಖಿ
ತನ್ನೊಳಗಿನ ಭಾವ ತನ್ನನ್ನೇ ಸುಡುವುದು ತಿಳಿ
ಸಮವಯಸ್ಸಿನ ಸಮಬಾಳು ಬೇಕೆಂದು ದೂರಸರಿದಿರುವೆ ಯಾಕೆ!(೪)
ಸಮಾಜದಿ ಮದ್ಯ ಪ್ರಶಸ್ತಿಪುರಸ್ಕಾರ ಪಡೆದರೆನಂತೆ
ಖುಷಿ ಪಡುವ ಮೊದಲ ವ್ಯಕ್ತಿ ಅಲ್ಲವೇ ಸೌಜನ್ಯದಂತೆ
ಸಂಭ್ರಮದಿಂದ ಸಡಗರದಿ ನಗುವ ಮೊಗವ ಮರೆತೇಕೆ!(೫)
ಒಂದು ಕ್ಷಣ ಯೋಚಿಸಿ ಅಂತರಂಗವ ತೆರೆದು
ಅಂಧಕಾರವ ಅಳೆದು ಜ್ಞಾನದ ಸಿಹಿಯನು ಉಂಡು
ಅನುಭವದ ಹಾದಿಯಿಂದ ಸರಿದು ನೋಡುವೆ ಯಾಕೆ!(೬)
ಜೊತೆಗಿದ್ದರು ದೂರದಿ ಇರುವಂತೆ ಕಾಣುವೆ
ಕಣ್ಣಿದುರಿನ ಸ್ನೇಹ ಕಾರಣ ಹೇಳದೆ ಕಾಣದೆ ಹೋಯಿತೆ
ಏನಿಲ್ಲ ಬದುಕಲ್ಲಿ ಒಳ್ಳೆಯ’ ಸ್ನೇಹ ಸೇತುವೆಯ ‘
ಒಂದು ನಾಣ್ಯದ ಮುಖ ಎರಡೆವೆಂದು ತಿಳಿದು ನಡೆ ಸಖಿ! (೭)
Beautiful ❤️ poem