ಭಾಗ್ಯ.ಎಂ.ವಿ. ಸಮಾನತೆ-ಶಿಶುಗೀತೆ

ಮಕ್ಕಳ ಸಂಗಾತಿ

ಭಾಗ್ಯ.ಎಂ.ವಿ.

ಸಮಾನತೆ

ಮೀನ ಬಾರೆ ಮಿಟ್ಟು ಬಾರೋ
ಓದಿ ಬರೆದು ಕಲಿಯುವಾ/
ನಾನು ನೀನು ಅವನು ಅವಳು
ಆಡಿಪಾಡಿ ನಲಿಯುವಾ//

ಸೋನು ಬಾರೊ ಸುಮನ ಬಾರೆ
ಚಿತ್ರ ಬರೆದು ಬಣ್ಣಿಸಿ/
ಹಾಳೆಯೊಂದೇ ಬಣ್ಣವೊಂದೇ
ತಮ್ಮ ಭಾವ ಬಿಂಬಿಸಿ//

ಸ್ಲೇಟು ಬಳಪ ಹಿಡಿವ ಕೈ
ಯಾರದಾದರೇನು?/
ತಾರತಮ್ಯ ತೋರೋದಿಲ್ಲ
ಕಲಿಕೆ ಸಿಹಿ ಜೇನು//

ಅಕ್ಕ ತಾರೆ ಹಾರೆ ಗುದ್ದಲಿ
ಅಣ್ಣ ತಾರೊ ಸಸಿಯನು/
ಸಸಿಯ ನೆಟ್ಟು ನೀರು ಹನಿಸಿ
ಬೆಳೆಸಿ ಹಸಿರ ವನವನು//

ಕಷ್ಟ ಸುಲಭ ಕೆಲಸದಾಯ್ಕೆ
ಅವರವರ ತೋಳ್ಬಲ/
ಕೆಲಸ ಚೊಕ್ಕ ಮಾಡುವಂತೆ
ಇರಲಿ ಮನದ ಹಂಬಲ//

ರಾಮ ರಹೀಮ್ ಮೀರಾ ಮೇರಿ
ಒಂದೇ ಇಲ್ಲಿ ಎಲ್ಲಾ/
ಬಡವ ಬಲ್ಲಿದ ಮಕ್ಕಳೆಂಬ
ಬೇಧವಿಲ್ಲಿ ಇಲ್ಲಾ//

ಒಂದೇ ಗಿಡದ ಹೂಗಳಂತೆ
ನಾವು ನಮ್ಮ ನಾಡಿಗೆ/
ಅರಿಯೋಣ ಸಮಾನತೆಯ
ಅವಲೋಕಿಸಿ ಮೆಲ್ಲಗೆ//

ಶಾಲೆ ಬಾನ ಬಯಲಿನಲ್ಲಿ
ಹೊಳೆವ ತಾರೆಯಾಗು/
ಕಲೆತು ಕಲಿತು ಬಲಿತು ಬೆಳೆದು
ಗುರಿಯ ಕಡೆಗೆ ಸಾಗು//


ಭಾಗ್ಯ.ಎಂ.ವಿ.

2 thoughts on “ಭಾಗ್ಯ.ಎಂ.ವಿ. ಸಮಾನತೆ-ಶಿಶುಗೀತೆ

  1. Very nice mam.You have been written so many rhymes and poems. Your creativity are model to us.You keep it, you will get good future. Thank you mam.

Leave a Reply

Back To Top