ಕಾವ್ಯ ಸಂಗಾತಿ
ಬಯಕೆ ನೂರು
ಸುಧಾ ಪಾಟೀಲ
ಹೊನ್ನಗಿಂಡಿಯಲಿ ಇಣುಕಿ
ತಾರೆಗಳ ಮಧ್ಯದಿ ಶಶಿ
ಮೂಡಿ ಮನದ ಕದವ
ತಟ್ಟಿದಾಗ ಸ್ಫುರಿಸಿದವು
ಬಯಕೆ ನೂರು
ಗೆಳತಿಯರ ಮಧ್ಯದಿ
ಬೆರೆತು ನಲಿಯಲು ನೀ
ನೆನಪಾದಾಗ ಅರಳಿದವು
ಬಯಕೆ ನೂರು
ನಾ ಮೈಮರೆತಾಗ ಮೆಲ್ಲನೆ
ಬಂದು ಅಪ್ಪಿ ಮುದ್ದಾಡಿ
ಪ್ರೀತಿಯ ಅಲೆಗಳು ಹೊಮ್ಮಿ
ಮೂಡಿದವು ಬಯಕೆ ನೂರು
ಸ್ನೇಹದ ಗಡಿಯ ದಾಟಿ
ಕ್ಷಣ ಕ್ಷಣವೂ ಯುಗಗಳಾಗಿ
ಮನದ ಕಂಪನ ಹೆಚ್ಚಾಗಿ
ಕಚಗುಳಿಯಿಟ್ಟವು ಬಯಕೆ
ನೂರು
ಮುನಿಸು ತೋರಿ ನೀ
ರಮಿಸಲು ಬಂದಾಗ
ಮಾತುಗಳ ಮೋಡಿ ಮಾಡಿ
ಹತ್ತಿರವಾದಾಗ ರೂಪುಗೊಂಡವು
ಬಯಕೆ ನೂರು
ಕೆಂಪು ಹಳದಿ ಗುಲಾಬಿಯ
ಮಧ್ಯದಿ ಮಲ್ಲಿಗೆಯ ಮಾಲೆ
ನೀ ಮುಡಿಸಿ ಸಿಂಗರಿಸಿದಾಗ
ಅರಳಿದವು ಬಯಕೆ ನೂರು
ಸುಧಾ ಪಾಟೀಲ
Excellent poem
ಸುಂದರ ಭಾವ ಮ್ಯಾಡಂ ಕವಿತೆ ತುಂಬಾ ಚೆನ್ನಾಗಿದೆ
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು
ಮೇಡಂ ಮತ್ತು ನನ್ನ ಕವನವನ್ನು ಓದಿ ಆಸ್ವಾದಿಸಿದ ಎಲ್ಲ ಕವಿ ಮನಸುಗಳಿಗೆ ವಂದನೆಗಳು