ವಿಶೇಷಲೇಖನ
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ
ವಾರ್ಷಿಕೋತ್ಸವ ಹಾಗೂ ದತ್ತಿ ಪುಸ್ತಕ
ಪ್ರಶಸ್ತಿಪ್ರಧಾನ ಸಮಾರಂಭ
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ
ವಾರ್ಷಿಕೋತ್ಸವ ಹಾಗೂ ದತ್ತಿ ಪುಸ್ತಕ ಪ್ರಶಸ್ತಿ
ಪ್ರಧಾನ ಸಮಾರಂಭ
ನೆನ್ನೆ ಬೆಳಿಗ್ಗೆ 30 / 07 / 2023 ರಂದು ರವಿವಾರ ಹತ್ತು ಘಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ
ವಾರ್ಷಿಕೋತ್ಸವ ಮತ್ತು ದತ್ತಿ ಪುಸ್ತಕ ಪ್ರಶಸ್ತಿ
ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಶ್ರೀಮತಿ ಜಯಶೀಲಾ ಬ್ಯಾಕೋಡ ಅಧ್ಯಕ್ಷರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ.. ಇವರು ತಮ್ಮ
ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ವಿದ್ಯಾ ಭಜಂತ್ರಿ ಮೇಡಂ ಉಪನಿರ್ದೇಶಕರು, ಕನ್ನಡ ಮತ್ತು
ಸಂಸ್ಕೃತಿ ಇಲಾಖೆ.. ಬೆಳಗಾವಿ ಇವರು ಅತಿಥಿಗಳಾಗಿಆಗಮಿಸಿದ್ದರು. ಶ್ರೀಮತಿ ಆಶಾ ಕಡಪಟ್ಟಿ..ಖ್ಯಾತಸಾಹಿತಿಗಳು.. ಬೆಳಗಾವಿ ಇವರು ಉಪಸ್ಥಿತರಿದ್ದರು.ಉಪಾಧ್ಯಕ್ಷರಾದ ಡಾ. ವಿಜಯಲಕ್ಷ್ಮಿ ಪುಟ್ಟಿ..ಅವರುತಮ್ಮ ಸ್ಥಾನವನ್ನು ಅಲಂಕರಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಮಾಜಿ ಅಧ್ಯಕ್ಷೆ ಹೇಮಾವತಿ ಸೊನ್ನೊಳ್ಳಿ ಅವರು ತಮ್ಮ ಎರಡು ವರ್ಷದ ಅವಧಿಯಲ್ಲಿನ ಸಾಧನೆ ಮತ್ತು ಪ್ರತಿಯೊಬ್ಬ ಸದಸ್ಯರ ಪರಿಚಯವನ್ನು ” ಸಂಯುಕ್ತ ” ಪುಸ್ತಕದಲ್ಲಿ ಪ್ರಕಟಿಸಿ ಇವತ್ತು ಬಿಡುಗಡೆ ಮಾಡಿದರು. ಅದರಲ್ಲಿಒಟ್ಟು ಒಂಬತ್ತು ಜನ ಸಾಹಿತಿಗಳು ಸಂಪಾದಕರಾಗಿಕೆಲಸ ಮಾಡಿದ್ದೇವೆ. ಈ ಪುಸ್ತಕವನ್ನು ಡಾ || ಗುರು
ದೇವಿ ಹುಲೆಪ್ಪನವರಮಠ.. ಖ್ಯಾತ ಸಾಹಿತಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕರು ಅತ್ಯಂತ ಸುಂದರ
ವಾಗಿ ನಮಗೆಲ್ಲ ಪರಿಚಯಿಸಿದರು.
ಈಗ ಮಹತ್ವದ ಕಾರ್ಯಕ್ರಮವಾದ ದತ್ತಿನಿಧಿಯ ಬಗ್ಗೆ
ತಿಳಿದುಕೊಳ್ಳೋಣ. ನಮ್ಮ ಸಂಘದ ಹಿರಿಯಲೇಖಕಿ ಶತಕಸಂಖ್ಯೆಯ ಕೃತಿಗಳನ್ನು ಬರೆದು ಸಮಾಜಕ್ಕೆ
ಅರ್ಪಿಸಿದ , ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ನೀಲಗಂಗಾ ಚರಂತಿಮಠ ಅವರ ಪರಿಕಲ್ಪನೆ ಮತ್ತು ಪ್ರೇರೆಪಣೆಯಿಂದ ಈ ದತ್ತಿ ಪ್ರಶಸ್ತಿ ಹುಟ್ಟಿಕೊಂಡಿದೆ. ನಮ್ಮ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಈ ನಿಟ್ಟಿನಲ್ಲಿ ಮಹಾತ್ಕಾರ್ಯವೊಂದನ್ನು ಗೈಯುತ್ತಿದೆ. ಲೇಖಕಿಯರಿಂದ ಅವರವರ
ಪ್ರೀತಿಪಾತ್ರರ ಸ್ಮರಣಾರ್ಥ ದತ್ತಿ ನಿಧಿಯೊಂದನ್ನು ಸ್ಥಾಪಿಸಿ ಆ ಮೂಲಕ ಅವರವರ ಇಚ್ಚಾನುಸಾರಕಾರ್ಯಕ್ರಮಗಳನ್ನು ನಡೆಸುವುದು ಇದರ ಮುಖ್ಯಉದ್ದೇಶ.ಹೀಗೆ ಮಾಡುವ ಮೂಲಕ ಇದರಲ್ಲಿ ತೊಡಗಿಕೊಂಡವರು ಸಾಮಾಜಿಕವಾಗಿ ಬಹುಮುಖವಾಗಿ ತಮ್ಮನ್ನು ತಾವು ಒಂದು ವೈಶಿಷ್ಟ್ಯಪೂರ್ಣ ಕೆಲಸ
ದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತೆ ಪ್ರೇರೇಪಿಸುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ.
ಜೊತೆಗೆ ವೈಯಕ್ತಿಕವಾಗಿ ಲೇಖಕರು ತಮ್ಮ ಪ್ರೀತಿಯಹಿರಿಯರಿಗೆ ಗೌರವವನ್ನು ತೋರಿಸಿದಂತಾಗುತ್ತದೆ.
ಅವರ ಹಿರಿಗುಣಗಳನ್ನು ಅಳವಡಿಸಿಕೊಳ್ಳುವತ್ತಲೂನಡೆದಂತಾಗುತ್ತದೆ ಮತ್ತು ಇನ್ನುಳಿದವರಿಗೂ ಅವು
ಗಳನ್ನು ಅಳವಡಿಸಿಕೊಳ್ಳಲು ಪ್ರೆರೇಪಿಸಿದಂತಾಗುತ್ತದೆತಮ್ಮ ಹಿರಿಯರನ್ನು ನೆನೆಸಿಕೊಳ್ಳುತ್ತ ತಾವು ಬದುಕಿ
ನಲ್ಲಿ ಮುನ್ನಡೆಯುವ ಮೂಲಕ ತಮ್ಮ ಹಿರಿಯರಿಗೆ ಗೌರವವನ್ನು ತೋರಿಸಿದಂತೂ ಆಯಿತು ಹಾಗೂ
ಹಿಂದಿನವರ ಅನುಭವದ ಅಮೃತವನ್ನು ಸವಿಯುವಮೂಲಕ ಇಂದಿನ ತಮ್ಮ ಸಮಸ್ಯೆಗಳನ್ನು ಸಲೀಸಾಗಿ
ಎದುರಿಸುವತ್ತಲೂ ಹೆಜ್ಜೆ ಇರಿಸಿದಂತಾಯಿತು. ಇದರೊಂದಿಗೆಸಮಾಜಕ್ಕೂಮತ್ತುಭವಿಷ್ಯದಪೀಳಿಗೆಗೂ
ಬದುಕಿನ ಸಂದೇಶವನ್ನು ಕೊಟ್ಟಂತಾಯಿತು.ಸಮಾಜದಲ್ಲಿ ಒಳ್ಳೆಯ ಪರಂಪರೆಯೊಂದನ್ನು ಉಳಿಸಿಕೊಳ್ಳು
ವತ್ತಲೂ ಮುಖ ಮಾಡಿದಂತಾಯಿತು. ಈ ಎಲ್ಲ ಸಚ್ಚಿ0ತನೆಗಳ ಜೊತೆ ಜೊತೆಗೆ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘಕ್ಕೆ ಆರ್ಥಿಕ ಊರುಗೋಲಾದಂತಾಯ್ತು.
ಇವತ್ತಿನ ದತ್ತಿದಾನಿಗಳು ಮತ್ತು ದತ್ತಿ ಪುರಸ್ಕೃತರು
1.. ಶ್ರೀಮತಿ ಜ್ಯೋತಿ ಬದಾಮಿ ದತ್ತಿ ಪುಸ್ತಕ ಪ್ರಶಸ್ತಿ
ದಾನಿಗಳು..ಶ್ರೀಮತಿ ಜ್ಯೋತಿ ಬದಾಮಿ
ವಿಜೇತರು..ಶ್ರೀಮತಿ ಸುನಂದಾ ಮುಳೆ
“ನಾರಿ ಜಾಗೃತಿಯ ಪ್ರಣೀತ ” ಸಂಕಲನಕ್ಕೆ
ಸುನಂದಾ ಮುಳೆ
2.. ದಿ. ರಾಚಮ್ಮ ಪಾಟೀಲ್ ದತ್ತಿ ಪುಸ್ತಕ ಪ್ರಶಸ್ತಿ
ದಾನಿಗಳು.. ಶ್ರೀಮತಿ ಸುಧಾ ಪಾಟೀಲ್
ವಿಜೇತರು..ಶ್ರೀಮತಿ ಮಮತಾ ಶಂಕರ
” ನದಿಯ ವೃತ್ತಾ0ತ ” ಕವನ ಸಂಕಲನಕ್ಕೆ
ಮಮತಾ ಶಂಕರ
3..ದಿ. ಶಿವನಾಗಪ್ಪ ಅಬ್ಬಿಗೇರಿ ಮತ್ತು ದಿ. ಸೂರ್ಯ ಕಾಂತ ಅಬ್ಬಿಗೇರಿ ದತ್ತಿ ಪುಸ್ತಕ ಪ್ರಶಸ್ತಿ
ದಾನಿಗಳು.. ಶ್ರೀಮತಿ ವಿದ್ಯಾ ಹುಂಡೇಕರ
ವಿಜೇತರು.. ಶ್ರೀಮತಿ ರೋಹಿಣಿ ಯಾದವಾಡ
” ಅಂತರ್ಗತ ” ಮಹಿಳಾ ಸಂಕಲನಕ್ಕೆ
ರೋಹಿಣಿ ಯಾದವಾಡ
4..ದಿ. ಮಹದೇವಪ್ಪ ನಿಡುವಣಿ ಹಾಗೂ ದಿ. ರಾಮನಗೌಡ ಪಾಟೀಲ್ ದತ್ತಿ ಪುಸ್ತಕ ಪ್ರಶಸ್ತಿ
ದಾನಿಗಳು.. ಶ್ರೀಮತಿ ಪ್ರಭಾ ಪಾಟೀಲ್
ವಿಜೇತರು.. ಶ್ರೀಮತಿ ಸುನಂದಾ ಹಾಲಬಾವಿ
” ಕಿಂಡಿ ತೂರಿ ಬಂತು ಕಿರಣ ” ಕಥಾ ಸಂಕಲನಕ್ಕೆ
ಸುನಂದಾ ಹಾಲಬಾವಿ
5.. ದಿ. ಮಾತೋಶ್ರೀ ಪಾರ್ವತಿದೇವಿ ಮೊಗಲಿ ದತ್ತಿ ಪುಸ್ತಕ ಪ್ರಶಸ್ತಿ
ದಾನಿಗಳು.. ಶ್ರೀಮತಿ ಇಂದಿರಾ ಮೋಟೆಬೆನ್ನೂರ
ವಿಜೇತರು.. ಶ್ರೀಮತಿ ಸುನಂದಾ ಎಮ್ಮಿ
” ಪಾವನಿ ಮತ್ತು ಇತರ ಕಥೆಗಳು ” ಕಥಾ ಸಂಕಲನಕ್ಕೆ
ಸುನಂದಾ ಎಮ್ಮಿ
6.. ಡಾ || ಹೇಮಾವತಿ ಸೊನೊಳ್ಳಿ ರಾಜ್ಯಮಟ್ಟದ ದತ್ತಿ ಪುಸ್ತಕ ಪ್ರಶಸ್ತಿ -2023
ದಾನಿಗಳು.. ಡಾ || ಹೇಮಾವತಿ ಸೊನೊಳ್ಳಿ
ವಿಜೇತರು.. ಡಾ || ಗುರುದೇವಿ ಹುಲೆಪ್ಪನವರಮಠ
” ಫಲದ ಮರೆಯ ರುಚಿ ” ಸಂಕಲನಕ್ಕೆ
ಹಾಗೂವಿಜೇತರು.. ಶ್ರೀಮತಿ ಸುಮಾ ಸತೀಶ
” ಹಾದಿಯಲ್ಲಿನ ಮುಳ್ಳುಗಳು ” ಸಂಕಲನಕ್ಕೆ
ಗುರುದೇವಿ ಹುಲೆಪ್ಪನವರಮಠ
7.. ಶ್ರೀ ಶಿವಪುತ್ರಪ್ಪ ಯಾದವಾಡ ಹಾಗೂ ಶ್ರೀಮತಿ
ಶಶಿಕಲಾ ಯಾದವಾಡ ದತ್ತಿ ಪುಸ್ತಕ ಪ್ರಶಸ್ತಿ
ದಾನಿಗಳು…ಶ್ರೀಮತಿ ರೋಹಿಣಿ ಯಾದವಾಡ
ವಿಜೇತರು.. ಶ್ರೀಮತಿ ಇಂದಿರಾ ಮೋಟೆಬೆನ್ನೂರ
” ಭಾವ ಬೆಳಗು ” ಪ್ರಥಮ ಕವನ ಸಂಕಲನಕ್ಕೆ.
ಇಂದಿರಾ ಮೋಟೆಬೆನ್ನೂರ
ಇನ್ನು ಇವತ್ತಿನ ದತ್ತಿ ಪುರಸ್ಕೃತರ ಬಗೆಗೆ ಒಂದಿಷ್ಟು
ತಿಳಿಯೋಣ.
ಸುನಂದಾ ಮುಳೆ ಅವರು ಕನ್ನಡ ಮತ್ತು ಹಿಂದಿ ದ್ವಿಭಾಷಾ ಕವಿಯಿತ್ರಿ. ಸಂಗೀತ ವಿದ್ವಾ0ಸರು. ಅಖಿಲ
ಭಾರತ ಕವಿಯಿತ್ರಿಯರ ಸಂಘದ ಅಂತರಾಷ್ಟ್ರೀಯ
ಈಜಿಪ್ತ, ಟರ್ಕಿ , ರಷ್ಯಾ, ತಾಷ್ಕೆಂಟ, ಥೈಲ್ಯಾಂಡ , ನೇಪಾಳ, ಲಂಡನ್ , ಪ್ಯಾರಿಸ, ಫ್ರಾನ್ಸ್ , ಜರ್ಮನಿ, ವ್ಯಾಟಿಕನ ಸಿಟಿ, ಇಟಲಿ , ರೋಮ್.. ಹೀಗೇ ಸಾಹಿತ್ತಿಕ
ಸಾಂಸ್ಕೃತಿಕ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.
ಅನೇಕಾನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ
ಹಿಂದಿ ಹಾಗೂ ಕನ್ನಡ ಹಾಡಿನ ಸಿ. ಡಿ. ಬಿಡುಗಡೆ ಗೊಳಿಸಿದ್ದಾರೆ.
ಮಮತಾ ಶಂಕರ ಅವರು ಕಾರ್ಮಿಕ ರಾಜ್ಯ ವಿಮಾ
ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕರಾಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ. ಇವರಿಗೆ ತಂದೆ ಪಾರ್ಥಸಾರಥಿ
ಅವರ ಸ್ಫೂರ್ತಿಯಿಂದ ಸಾಹಿತ್ಯದಲ್ಲಿ ಆಸಕ್ತಿ ಮೂಡಿದೆ. ಅನೇಕ ಸಂಘ ಸಂಸ್ಥೆಗಳ ಪದಾಧಿಕಾರ
ವನ್ನು ಹೊಂದಿದ್ದಾರೆ. ಇವರು ಲೇಖನಗಳನ್ನು, ಕವಿತೆ
ಗಳನ್ನು ಬರೆಯುತ್ತಿರುತ್ತಾರೆ. ಮಯೂರ, ತುಷಾರ, ಮಲ್ಲಿಗೆ , ವಿಜಯ ಕರ್ನಾಟಕ ,ಹೊಸತು, ಪ್ರಿಯಾ0ಕಾ
ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಮರ್ಶಾ
ಲೇಖನಗಳನ್ನು ಬರೆಯುತ್ತಿರುತ್ತಾರೆ. ಹಲವಾರು ಸಾಹಿತ್ತಿಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲಿ ಸತತ ಭಾಗವಹಿಸುತ್ತಾ
ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿ
ಕೊಂಡಿದ್ದಾರೆ.
ಶ್ರೀಮತಿ ರೋಹಿಣಿ ಯಾದವಾಡ ಅವರು ಹೈಸ್ಕೂಲ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ
ಪತ್ರಕರ್ತರು ಹಾಗೂ ಸಾಹಿತಿಗಳು. ” ಅಣ್ಣಾ ಹಜಾರೆ ವ್ಯಕ್ತಿ ಚಿತ್ರಣ ” ” ಜೀವ ಸೆಲೆ ” ” ವಚನ ಸೌರಭ “
” ಆರದ ನಂದಾದೀಪ “ಈಶ ” ” ಗೀತಗುಚ್ಚ ” “ಬೆಳ್ಳಿ
ಬೆಳಗು ” ಡಾ || ಅಶೋಕ ನರೋಡ ಸಂಪಾದನಾ ಲೋಕ ಕೃತಿಗಳು ಹೊರಗೆ ಬಂದಿವೆ.ಬೆಳಗಾವಿಜಿಲ್ಲಾ
ಆದರ್ಶ ಶಿಕ್ಷಕಿ, ಪತ್ರಕರ್ತೆ.. ಕರ್ನಾಟಕ ಸರ್ಕಾರದಿಂದ
ರಾಜ್ಯ ಯುವ ಪ್ರಶಸ್ತಿ ಹಾಗೂ ವಿವಿಧ ಸಂಘಟನೆ
ಗಳಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಷ್ಟ್ರ ಹಾಗೂ
ಅಂತಾರಾಷ್ಟ್ರೀಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿ
ದ್ದಾರೆ.
ಶ್ರೀಮತಿ ಸುನಂದಾ ಹಾಲಭಾವಿ ಅವರು ” ಮಂದಾರ ಕಥಾ ಸಂಕಲನ, “ಹನಿ ಸಿಂಚನ ” ಹನಿಗವನ ಹಾಗೂ
” ಕಮಾನುಕಟ್ಟಿತು ” ” ಕಾಮನಬಿಲ್ಲು ” ಕಥಾಸಂಕಲನ
ಹೊರ ತಂದಿದ್ದಾರೆ. ಇವರ ಕಥೆಗಳು ಸುಧಾ, ತರಂಗ
ಮಯೂರ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿವೆ. ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ
ಪಡೆದಿದ್ದಾರೆ. ” ಹನಿ ಸಿಂಚನ ” ಕೃತಿಗೆ ಕನ್ನಡ ಸಾಹಿತ್ಯ
ಪರಿಷತ್ ನ ಆರ್.ಜೆ.ಗಲಗಲಿ ದತ್ತಿಪ್ರಶಸ್ತಿ ದೊರಕಿದೆ.
” ಕಮಾನು ಕಟ್ಟಿತು ” ” ಕಾಮನ ಬಿಲ್ಲು ” ಕೃತಿಗೆ ಕನ್ನಡಸಾಹಿತ್ಯ ಪರಿಷತ್ ನ ಕೆ. ವಾಸುದೇವಾಚಾರ್ಯ
ದತ್ತಿ ಪ್ರಶಸ್ತಿ ದೊರಕಿದೆ. ಜಿಲ್ಲಾ ಮಟ್ಟದ ವರ್ಷದ
ಶ್ರೇಷ್ಠ ಕೃತಿ ಪ್ರಶಸ್ತಿ ದೊರಕಿದೆ.
ಶ್ರೀಮತಿ ಸುನಂದಾ ಎಮ್ಮಿ ಅವರು ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಓದುವ
ಹಾಗೂ ಬರೆಯುವ ಹವ್ಯಾಸ ಇವರಿಗಿದೆ. ಇವರ ಕವನ ಸಂಕಲನಗಳು, ಲೇಖನಗಳ ಸಂಕಲನಗಳು ,
ಕಥಾ ಸಂಕಲನ, ಕಾದಂಬರಿ, ನಾಟಕ, ಚುಟುಕು ಸಂಗ್ರಹ ಹೀಗೆ ಇಪ್ಪತ್ತು ಕೃತಿಗಳು ಪ್ರಕಟವಾಗಿವೆ.
ಇವರು ಬರೆದ ನಾಟಕಗಳು ಬಹುಮಾನ ಪಡೆದಿವೆ.
ಇವರು ಅನೇಕ ಸಂಘ ಸಂಸ್ಥೆಗಳ ಪದಾಧಿಕಾರವನ್ನು
ಹೊಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ನ ಮತ್ತು
ಇತರ ಪ್ರಶಸ್ತಿಗಳು ಲಭಿಸಿವೆ. ಕಿತ್ತೂರು ತಾಲೂಕಾ
ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು
ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರು.
ಡಾ || ಗುರುದೇವಿ ಹುಲೆಪ್ಪನವರಮಠ ಅವರು ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕರು. ” ನೀರು ” “ಮೂಗು ಮುರಿ ” ” ಬಿಡುಗಡೆಯ ಸಡಗರ ” “ನನ್ನಜ್ಜಿ
ಗುಜ್ಜಿ ” ” ಚುಟುಕು ಗುಟುಕು ” ” ತನುವೆಂಬ ಹುತ್ತದಲಿ ” ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಸುಪ್ರಸಿದ್ಧ ಭಾಷಣಕಾರರು, ಉಪನ್ಯಾಸಕರು ಹಾಗೂ
ಸಾಹಿತಿಗಳು. ಹಾಸ್ಯ ಬರಹಗಳು ವಿವಿಧ ವಿಶ್ವ ವಿದ್ಯಾಲಯಗಳ ಪಠ್ಯದಲ್ಲಿ ಸೇರ್ಪಡೆಯಾಗಿವೆ. ಸೃಜನಾತ್ಮಕ ಹಾಗೂ ಸಂಶೋಧನಾತ್ಮಕ ಲೇಖನ
ಗಳನ್ನು ಬರೆಯುತ್ತಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ ನ ದತ್ತಿ ಪ್ರಶಸ್ತಿ , ಬೆಳಗಾವಿ ಸಾಹಿತ್ಯ ಪ್ರತಿಷ್ಟಾನದ ಪ್ರಶಸ್ತಿ ಹೀಗೆ ಇನ್ನೂ ಅನೇಕ ಪ್ರಶಸ್ತಿ
ಗಳನ್ನು ಪಡೆದಿದ್ದಾರೆ. ಇನ್ನೊಬ್ಬ ವಿಜೇತೆ ಸುಮಾ ಸತೀಶ್ ಅವರು ಖ್ಯಾತ ಸಾಹಿತಿ.. ಬೆಂಗಳೂರಿನಲ್ಲಿ
ನೆಲೆಸಿದ್ದಾರೆ.
ಶ್ರೀಮತಿ ಇಂದಿರಾ ಮೋಟೆಬೆನ್ನೂರ ಅವರು ಸಾಹಿತ್ಯ
ದಲ್ಲಿ ಆಸಕ್ತಿ ಉಳ್ಳವರು. ರಾಜ್ಯಮಟ್ಟದ ಕವಿಗೋಷ್ಠಿ
ಗಳಲ್ಲಿ ಕವನವಾಚನ ಮಾಡಿದ್ದಾರೆ. ಇವರ ಕವಿತೆಗಳು
ಹಾಗೂ ಲೇಖನಗಳು ಮಯೂರ, ಲೋಕದರ್ಶನ,
ಕುಂದಾನಗರಿ, ನಾಡಿನ ಸಮಾಚಾರ ಪತ್ರಿಕೆಗಳಲ್ಲಿ
ಪ್ರಕಟವಾಗಿವೆ.ಹಾಡುಗಾರಿಕೆ ,ನಾಟಕಗಳಲ್ಲಿಅಭಿನಯ
ಓದುವುದು, ಬರೆಯುವುದು, ತೋಟಗಾರಿಕೆ, ಇವರ
ಹವ್ಯಾಸಗಳು. ಬೆಳಗಾವಿಜಿಲ್ಲಾ ಲೇಖಕಿಯರ ಸಂಘದ
ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಮಾಗಮ ಗ್ರಂಥದ ಸಂಪಾದಕರಲ್ಲೊಬ್ಬರು.ಇವರು
ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಹೀಗೆ ದತ್ತಿನಿಧಿ ದಾನಿಗಳು ಮತ್ತು ಪುರಸ್ಕೃತರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯ
ಕ್ರಮ ಯಶಸ್ವಿಯಾಗಿನಡೆಯುವಲ್ಲಿ ಕೈಜೋಡಿಸಿದರು
ಸಂಘದ ಅಧ್ಯಕ್ಷರು.. ಉಪಾಧ್ಯಕ್ಷರು.. ಕಾರ್ಯದರ್ಶಿ ಗಳು..ಕೋಶಾಧ್ಯಕ್ಷರು ಮತ್ತು ಎಲ್ಲಾಪದಾಧಿಕಾರಿಗಳಿಗೆ
ಆದರದ ಪ್ರಣಾಮಗಳು..ಇವರೆಲ್ಲರೂಕಾರ್ಯಕ್ರಮದ
ರೂವಾರಿಗಳು..
ಇನ್ನೂ ಬಹಳಷ್ಟು ಜನರು ದತ್ತಿನಿಧಿ ಇಟ್ಟಿದ್ದಾರೆ ಅವರು ಹೇಳಿದ ರೀತಿಯಲ್ಲಿ ಅವರ ಕಾರ್ಯಕ್ರಮವನ್ನು ರೂಪಿಸುತ್ತಾರೆ. ಮುಂದಿನ
ಲೇಖನದಲ್ಲಿ ದತ್ತಿದಾನಿಗಳ ಬಗೆಗೆ ತಿಳಿಯೋಣ.
ಸುಧಾ ಪಾಟೀಲ್
ಕಣ್ಣಿಗೆ ಕಾಣುವ ಅತ್ಯಂತ ಸುಂದರ ಪ್ರೋಗ್ರಾಂ ನಿಮ್ಮ ವರದಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ
ಸುಧಾ ಪಾಟೀಲ ಬೆಳಗಾವಿ ಈಗ ಬಹು ಮುಖ ಪ್ರತಿಭೆ ಸಾಹಿತಿ ಒಳ್ಳೆಯ ಲೇಖಕಿ ವಿಮರ್ಶಕಿ ಚಿಂತಕಿ ಕವಿ
ಅವರ ಲೇಖನ ಓದುವುದೇ ಸೌಭಾಗ್ಯ ಎನ್ನಬೇಕು
ಬಹಳ ಚೆಂದದ ಪರಿಚಯ, ಸಂಘದ ದತ್ತಿ ಪ್ರಶಸ್ತಿ ಕುರಿತು ಹಾಗೂ ಕಾರ್ಯಕ್ರಮ ಕುರಿತ ಒಳ್ಳೆಯ ಬರಹ ಸುಧಾ ಮೇಡಂ….