ಇಮಾಮ್ ಮದ್ಗಾರ ಕವಿತೆ-ಗೆಲುವಿನ ಬೆಲೆ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಗೆಲುವಿನ ಬೆಲೆ

ಕರಗದ ಕಲ್ಲು
ಎಂಬರಿವಾದ ಮೇಲೆ
ಕೊರಗಿದರೆ ಫಲವೇನು ?
ಕರುಣೆ ಕಳೆದುಕೊಂಡ
ಕಣ್ಗಳಿಗೆ ಕಣ್ಣ ಕಂಬನಿ
ಕಾಣುವದೇನು ?

ಕಣ್ಣಿಲ್ಲದವರಿಗೆ
ನಮ್ಮ ಕಣ್ಣೀರು
ಕಾಣದಿರ ಬಹುದು
ನಿಜ !! ಆದರೆ..
ಕಣ್ಣಿಲ್ಲ ದವರಿಗೂ..
ಕಣ್ಣೀರು ಬರವುದು ತಾನೇ ??

ಸುಳ್ಳಿನ ಸೂಜಿಗೆ
ಮೋಸದ ದಾರ ಸೇರಿಸಿ
ಹರಿದ ಬಟ್ಟೆಯ ಮಧ್ಯೆ
ಹರಿದ ಸತ್ಯದ ಬಟ್ಟೆಯ
ಮುಚ್ಚಿಟ್ಟು ಚುಚ್ಚಿ
ಹೊಲಿದಂತೆ !

ಮೋಡಗಳ
ಘರ್ಷಣೆಯಲಿ
ಮಿಂಚೊಂದು ಹುಟ್ಟಿ
ಅಣಿಯಾದ
ಮರವೊಂದ ಸಿಡಿಲಾಗಿ
ಸುಟ್ಟಂತೆ !!

ಸೋಲುವೆನೆಂಬ
ಭಯವಿಲ್ಲ ನನಗೆ
ನಿನ್ನ ಗೆಲುವಿಗೆ ಬೆಲೆ
ಬರಲಾದರೂ..ನಾನು
ಸೋಲಲೇ ಬೇಕು
ಅದು ಅನಿವಾರ್ಯ !!


ಇಮಾಮ್ ಮದ್ಗಾರ

Leave a Reply

Back To Top