ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ನಾನೆಂದರೆ
ಶುಭ್ರ ಪರಿಶುಭ್ರ
ಮನಸ ಕನಸಿನ ಪಯಣ
ನವಿಲುಗರಿ….
ಭಾವನೆಗಳ ತಾಕಲಾಟದಲಿ
ಉತ್ತರ ಸಿಗದೆ ನಿರುತ್ತರಿ
ನಾನು ನನ್ನದು
ಎಂಬ ಮಮಕಾರ
ಮನಸ ತುಂಬ ಪ್ರೀತಿ ಚಿತ್ತಾರ
ಸಾಧನೆ-ಸಾಧಕಿ ಅಲ್ಲವೇ ಅಲ್ಲ
ಆದರೂ ಎಲ್ಲರಂತಲ್ಲ ನಾನು
ಅಗೋಚರ…
ನನ್ನ ಉಸಿರಿಗೂ
ಒಂದು ಹೆಸರಿದೆ
ಪ್ರೀತಿ ಆಗಸದ
ಮಿನಗು ನಕ್ಷತ್ರ
ಬದುಕ ಪುಟ ತಿರುವಿದಷ್ಟು
ಖುಷಿಗಳ ಹಾವಳಿ
ಕಷ್ಟ ಸುಖದ ಕ್ಯಾಲೆಂಡರಲ್ಲಿ
ದಿಟ್ಟ ನಿರ್ಥಾರಗಳ ಪ್ರಭಾವಳಿ
ಬೆಳಕಿಲ್ಲದ ದಾರಿಯಲ್ಲಿ ನಡೆಯುವ ಧೈರ್ಯ
ಭ್ರಮೆ ಅಲ್ಲ………
ದಿಟ್ಟತೆ, ಸ್ಪಷ್ಟತೆ,ಸನ್ನಡತೆ…
ಗೊಂದಲದ ಗೂಡಾಗುತ್ತೇನೆ ಒಮ್ಮೊಮ್ಮೆ
,ಭಾವನೆಗಳ ಪರಿಧಿಯಲ್ಲಿ
ಮತ್ತೊಮ್ಮೆ ಗೆದ್ದು ಬೀಗುತ್ತೇನೆ
ಬೌದ್ಧಿಕತೆಯ ಪ್ರಶಾಂತತೆಯಲಿ..
ಬದುಕಿಗೆ ವಿಷ
ಉಣಿಸಿದವರ ಮುಂದೆ
ಎಚ್ಚರದಿಂದ ಎದ್ದು ನಿಂತಿದ್ದಿದೆ
ನಾನು ನಾನಲ್ಲ,
ನನ್ನಂತೆ ಪರರು ಅಂದಾಕಿ
ಬದುಕ ರಂಗಾಯಣದಿ
ಎಲ್ಲ ಪಾತ್ರಗಳಿಗೂ ಸೈ ಅನಿಸಿಕೊಂಡಾಕಿ
ನೀರೆ ನಾ,ನೀರಿನಂತೆ
ಶುಭ್ರ ಪರಿಶುಭ್ರ……….
ಮೀನಾಕ್ಷಿ ಸೂಡಿ.
Kashta sukhagala calendarinalli
Ditta nirdharangala prabhavali
Super tumba arthagarbhita saalugalu
Pramod joshi
Super thought
ತುಂಬಾ ಚೆನ್ನಾಗಿದೆ, ಪ್ರತಿ ಸಾಲುಗಳಲ್ಲಿ ನಿಮ್ಮ ಸ್ವಾಭಿಮಾನ ಎತ್ತಿ ಹಿಡಿದ ಕನ್ನಡಿಯಾಗಿದೆ,,ನಿಮ್ಮ ವಿದ್ಯಾರ್ಥಿನಿ ಆಗಿರುವುದಕ್ಕೆ ಬಹಳ ಖುಷಿಯಾಗುತ್ತಿದೆ,,,
ಬದುಕಿಗೆ ವಿಷ
ಉಣಿಸಿದವರ ಮುಂದೆ
ಎಚ್ಚರದಿಂದ ಎದ್ದು ನಿಂತಿದ್ದಿದೆ
ನಾನು ನಾನಲ್ಲ,
ನನ್ನಂತೆ ಪರರು ಅಂದಾಕಿ
ಬದುಕ ರಂಗಾಯಣದಿ
ಎಲ್ಲ ಪಾತ್ರಗಳಿಗೂ ಸೈ ಅನಿಸಿಕೊಂಡಾಕಿ
I liked these lines mam..
ಧನ್ಯವಾದಗಳು ಎಲ್ಲರಿಗೂ
ಕವಯತ್ರಿ
ಅತ್ಯುತ್ತಮ ಬರವಣಿಗೆಯ ಸಾಲಿನಲ್ಲಿ ನಿಲ್ಲಬಹುದಾದ ಲೇಖನ ನಿಮ್ಮದು…
ಹೀಗೆಯೇ ಮುಂದುವರಿಯಲಿ ನಿಮ್ಮಿಂದ ಸಾಹಿತ್ಯದ ಗಾನಲಹರಿ ಎಂಬ ಸದಾಶಯ ನಮ್ಮದು….
Gelati kavite tumba chennagide ede riti saagali Nina payana