ಸುರೇಶ ತಂಗೋಡ-‘ಬಟಾಬಯಲು’

ಕಾವ್ಯ ಯಾನ

ಸುರೇಶ ತಂಗೋಡ

ಬಟಾಬಯಲು’

ನಾರಿಯರನ್ನು ಪೂಜಿಸುವ
ನಾಡಿನಲ್ಲಿನ ನರಮೇಧ ಕೃತ್ಯ
ಅಸಹನೀಯ, ಅಮಾನವೀಯ.

ಅವಳನ್ನು ವಿವಸ್ತ್ರಗೊಳಿಸಿದಾಗ
ಕಂಡದ್ದು ಹಸಿ ಮುದ್ದೆ ಮಾಂಸವೊ,
ಬರೀ ದೇಹವೊ ನಾ ಕಾಣೆ
ಆದರೆ
ವಿಕೃತ ಮನಸ್ಸಿನ ಮಾನವರ
ಬಣ್ಣ ಬಟಾಬಯಲಾಗಿದೆ.

ಹೆಣ್ಣೆಂದರೆ ಬರೀ ಭೋಗವೇ
ಭಾಗ್ಯವಲ್ಲವೇ?
ಅವಳಿಗೂ ಒಂದು ಬದುಕಿಲ್ಲವೇ?
ಹೀನ ಕೃತ್ಯಗೈದವರಿಗಿಲ್ಲ
ಕ್ಷಮಾಪಣೆ
ಕಠಿಣ ಶಿಕ್ಷೆಯೊಂದೇ
ಅವಳಿಗೆ ನಾವು ನೀಡುವ ಸಮಾಧಾನದ ಅರ್ಪಣೆ.

ಸಮಾಜ ಹದಗೆಟ್ಟು
ಚರಂಡಿ ಮೋರಿಯಾಗಿದೆ,
ತೊಳಯಲು ಆಗದಷ್ಟು.
ಬದಲಾಯಿಸೋಣ
ಮನಗಳನ್ನು,ಮನುಷ್ಯರನ್ನು,
ಕೃತಿಗಳನ್ನು.
ಬನ್ನಿ ಮತ್ತೇ ಮಣಿಪುರದಲ್ಲಿನ ಅನ್ಯಾಯಕ್ಕೆ
ಧ್ವನಿಯಾಗೋಣ…..ಧರಣಿ ಮಾಡೋಣ….


ಸುರೇಶ ತಂಗೋಡ

Leave a Reply

Back To Top