ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್,
ಒಲವ ಚಂದಿರ
ಮನದಂಗಳದಿ ಒಲವಿನ ಚಂದಿರನು
ಬೆಳಕ ಚೆಲ್ಲುತ ಬಂದನೇನೇ
ತನುವ ತಂಪಾಗಿಸಿ ಮಧುರ ಭಾವಗಳ
ಹೊನಲ ಹರಿಸಿ ನಿಂದನೇನೇ
ಚೆಲುವ ಪುತ್ಥಳಿಯಂತೆ ಹೊಳೆವ ಕಂಗಳಲಿ
ಮೋಡಿಯ ಮಾಡಿದನೇನೇ
ನಲಿವ ನವಿಲಿನ ಒನಪಲಿ ಗರಿಬಿಚ್ಚಿ ಕುಣಿದು
ಪ್ರೇಮಲೋಕದಿ ಮಿಂದನೇನೇ
ಅಂದದ ಮೊಗದಲಿ ಹುಣ್ಣಿಮೆಯ ಲಾಲಿತ್ಯದಿ
ಸನಿಹ ಸೆಳೆದನೇನೇ
ಚೆಂದದ ಮುತ್ತಿನ ಹಾರವನು ತೊಡಿಸುತ
ಬಾಹುಗಳಲಿ ಬಂಧಿಸಿದನೇನೇ
ಬಾನಿನ ತಾರೆಯಂತೆ ಹೊಳಪು ಬದುಕಲಿ
ಹೊಸತು ರಾಗವ ಹಾಡಿತೇನೇ
ಜೇನಿನ ರಸದಲಿ ಅಕ್ಕರೆಯ ಬೆರೆಸುತ
ಅಮೃತದ ರುಚಿಯ ಸವಿದನೇನೇ
ಅನುರಾಧಾ ರಾಜೀವ್ ಸುರತ್ಕಲ್
ಪೊರ್ಲುದ ಬರವು
ಒಳ್ಳೆಯ ಲೇಖನ.