ಡಾ ಡೋ.ನಾ.ವೆಂಕಟೇಶ ಕವಿತೆ-ಹಂಗಿಲ್ಲದ ಕನಸು

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಹಂಗಿಲ್ಲದ ಕನಸು

ನಿದ್ದೆಯಿಂದ ಎದ್ದಾಗ ನಿದ್ದೆ
ಮಾಡಿರಲೇ ಇಲ್ಲ
ಕಳೆದ ಮೈಲಿಕಲ್ಲುಗಳನ್ನ ತುಳಿದ ಹಾದಿಬೀದಿಗಳನ್ನ
ಹಾದು ಬರಲೇ ಇಲ್ಲ!

ನಿದ್ದೆಯಿಂದೆದ್ದಾಗ ಯಾಕೋ
ಹಾಳಾದ್ದು ಗಾಯ
ವ್ರಣವಾಗಿ
ನಿರಂತರ ಮಾಯಾಜಾಲ!

ಉಸಿರಾಡಿದ ನೆನಪು
ಕಿತ್ತರೆ ಕೈಯಲ್ಲೆ ಹೃದಯ
ಬಿಸಿಯಾದ ಶ್ವಾಸ!

ಹಾಗೇ-
ಮತ್ತೆ ನಿದ್ದೆಯಿಂದೆದ್ದಾಗ
ನಾನಿರಲಿಲ್ಲ
ಬರೆ ನೀನೇ!
ಕನಸಿನ ಕೂಗಿಲ್ಲ
ಹಾಗೂ
ನಿನ್ನ ಹಂಗೂ ಇಲ್ಲ


ಡಾ ಡೋ.ನಾ.ವೆಂಕಟೇಶ

8 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಹಂಗಿಲ್ಲದ ಕನಸು

  1. ನಿಮ್ಮ ಇನ್ನೊಂದು ಸುಂದರವಾದ ಕವನವನ್ನು ಗಮನಿಸಲು ತುಂಬಾ ಸಂತೋಷವಾಗಿದೆ ಮತ್ತು ನಾನು ಹಗಲು ಕನಸು ಕಾಣುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ತುಂಬಾ ಚೆನ್ನಾಗಿದೆ.ಶುಭಾಶಯಗಳು

    1. ಥ್ಯಾಂಕ್ಸ್!ನೀವು ಓದಿದ ಕವನ ನೀವು ಓದಿದ್ದೇ ಅಲ್ಲ!
      Manjunath Thanq very much

  2. ಕನಸು ನನಸಿನ ಚಕ್ರವ್ಯೂಹದ ನಡುವೆ ಕಾಣುವುದೆಲ್ಲವು ಮಾಯಾಜಾಲ.
    ಮಾಯೇ ತೊರೆದೊಡೆ ಯಾರದೇ ಹಂಗಿಲ್ಲ ಕಾಣು..
    ವೆಂಕಣ್ಣ ಚೆನ್ನಾಗಿದೆ.

  3. ಬದುಕಿದ್ದು ಕನಸೋ, ಬಾಳಿದ್ದು ನನಸೋ
    ಅಥವಾ ಇದೆಲ್ಲ ಮಾಯಾಜಾಲವೋ!
    ಅದಿರಲಿ,ನಮ್ಮ ಮೊದಲೇ ಹಾಡಿದ್ದಾರೆ
    “ಜಗವೇ ನಾಟಕ ರಂಗ”
    Thanks Surya!

    1. Nevertheless .These poems are intended to really think it over and over. Once you can appreciate it , then you will understand it
      Thank you Roopa latha!

    2. Just think it over.Its our old ‘ಜಗವೆ ನಾಟಕ ರಂಗ’
      ಧನ್ಯವಾದಗಳು!

Leave a Reply

Back To Top