ಡಾ. ದಾನಮ್ಮ ಝಳಕಿ ಕವನ-ಅಕ್ಷರ ಕಲಿಕೆ

ಕಾವ್ಯ ಸಂಗಾತಿ

ಡಾ. ದಾನಮ್ಮ ಝಳಕಿ.

ಅಕ್ಷರ ಕಲಿಕೆ

ಹಸಿದೊಡಲು ಹಂಬಲಿಸಿದೆ
ಅಕ್ಷರದ ಕಲಿಕೆಗೆ
ಜಾತಿ ಬೇಧಗಳೆನದಿರಿ
ಲಿಂಗಬೇಧವೆನದಿರಿ
ಹೆಣ್ಣೆಂದು ಜರಿಯದಿರಿ
ಮರೆಯದಿರಿ ನನ್ನನು
ಕಳುಹಿಸಿರಿ ಶಾಲೆಗೆ
ಹಂಬಲಸಿ ಹಂಬಲಸಿ
ಕೇಳುತಿದೆ ಹಸಿದೊಡಲು
ಅಕ್ಷರದ ಪಣತೆಯನು
ಹೊತ್ತಿಸಿರಿ ಮನದಲಿ
ಅನ್ನ ನೀರಿಂದ ತಣಿದಿಲ್ಲ
ಬಟ್ಟೆ ಬರೆಗಳು ಬೇಕಿಲ್ಲ
ಕಲಿಕೆಗೊಂದು ಅವಕಾಶ
ಕಲ್ಪಿಸಿದರೆ ಕಲ್ಪವೃಕ್ಷ
ಫಸಲಿನಂತೆ ಹುಲಸಾಗಿ
ಹಬ್ಬುವುದು ಅಕ್ಷರದ ಜಾತ್ರೆ
ಪಾತ್ರೆ ಪಾತ್ರೆಯಲಿ ತುಂಬುವೆ
ಪಣತಿಯಂತೆ ಬೆಳಗುವೆ
ತನುಮನದಿಂದ ಕಲಿಯುವೆ
ಕಲಿತದ್ದು ಬೆಳೆಯುವೆ
ಹಚ್ಚಿಬಿಡಿ ಒಡಲೊಳಗೆ
ಜ್ಞಾನ ಜ್ಯೋತಿಯ ಕಿಡಿಯನು
ತಣಿಸಿಬಿಡಿ ಎನ್ನಹಸಿದೊಡಲನು


ಡಾ. ದಾನಮ್ಮ ಝಳಕಿ.

3 thoughts on “ಡಾ. ದಾನಮ್ಮ ಝಳಕಿ ಕವನ-ಅಕ್ಷರ ಕಲಿಕೆ

  1. ಹಲವು ಹುಡುಗಿಯರ ಮನದಾಳದ ಮಾತುಗಳು ಕವಿತೆಯ ರೂಪದಲ್ಲಿ ಚೆನ್ನಾಗಿ ಮೂಡಿ ಬಂದಿದೆ.

    1. ಮಹಿಳಾ ಶಿಕ್ಷಣದ ಅನನ್ಯ ತುಡಿತ ಈ ಕವನದಲ್ಲಿದೆ. ಧನ್ಯವಾದಗಳು

Leave a Reply

Back To Top