‘ನನ್ನ ಬೀಡು’ ಕವಿತೆ ಮನ್ಸೂರ್ ಮುಲ್ಕಿ

ಕಾವ್ಯ ಸಂಗಾತಿ

‘ನನ್ನ ಬೀಡು’

ಮನ್ಸೂರ್ ಮುಲ್ಕಿ

ತೆಲಾಡುತ ಧರೆಗಿಳಿಯುವ ಮೋಡಗಳಲಿ
ಮೈಯೊಡ್ಡಿ ಮುಗಿಲ ಮರೆಯಾಗಿ ಬರಲು
ಬನ್ನಿ ಹೃದಯ ಕವಿಯ ಬೀಡಿಗೆ
ಕಾರ್ನಾಡು ಸದಾಶಿವ ರಾವ್ ನಗರಕೆ

ಹಸಿರು ಹುಲ್ಲಿನ ಹಾಸಿಗೆಯಲ್ಲಿ ಕುಳಿತು
ಕೈಗೆಟಕುವಂತಿರೊ ನೀಲಿಬಾನನು ನೋಡಲು
ಬನ್ನಿ ಹೃದಯ ಕವಿಯ ಬೀಡಿಗೆ
ಕಾರ್ನಾಡು ಸದಾಶಿವ ರಾವ್ ನಗರಕೆ

ಹಾರುವ ಹಕ್ಕಿಯ ರೆಕ್ಕೆಯ ಬಡಿತವನ್ನು
ಆಲಿಸಲು ಬಯಸುವ ಕಿವಿಗಳೇ
ಬನ್ನಿ ಹೃದಯ ಕವಿಯ ಬೀಡಿಗೆ
ಕಾರ್ನಾಡು ಸದಾಶಿವ ರಾವ್ ನಗರಕೆ

ಬೀಸುವ ಗಾಳಿಯು ನುಡಿಸುವ ಸಂಗೀತವನು
ಕಾಡ ಹೂವಿನ ಅಂದವನು ಕಾಣಲು
ಬನ್ನಿ ಹೃದಯ ಕವಿಯ ಬೀಡಿಗೆ
ಕಾರ್ನಾಡು ಸದಾಶಿವ ರಾವ್ ನಗರಕೆ

ಸಂಜೆ ಬಾನಿನ ಸೂರ್ಯನ ಕಲರವ
ಹೊರಡೋ ಚುಕ್ಕಿಗಳ ಅಂದವ ಸವಿಯಲು
ಬನ್ನಿ ಹೃದಯ ಕವಿಯ ಬೀಡಿಗೆ
ಕರ್ನಾಡು ಸದಾಶಿವ ರಾವ್ ನಗರಕೆ.


ಮನ್ಸೂರ್ ಮುಲ್ಕಿ

Leave a Reply

Back To Top