ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸೂರ್ಯೋದಯ ಸೊಬಗು

ಡಾ.ಸುಮತಿ ಪಿ.

ಮುಂಜಾನೆ ಸಮಯ ಬಾನಿನ ತುಂಬ
ಕೆಂಪಿನ ರಂಗದು ಚೆಲ್ಲುತ ಪಸರಲು
ಮೋಡವ ಸರಿಸುತ ಭಾನು ಮೂಡಿದ
ಭುವಿಯ ತುಂಬ ಬೆಳಕನು ಹರಡಲು

ಹಕ್ಕಿಗಳು ಗೂಡಲಿ ಚಿಲಿಪಿಲಿ ಗುಟ್ಟುತ
ಸೂರ್ಯನ ಆಗಮನಕೆ ಸ್ವಾಗತಕೋರಲು
ನೇಸರ ಕಿರಣಕೆ ಚೇತನವನು ತುಂಬಿ
ಮುದುಡಿದ ತಾವರೆ ಬಿರಿದು ನಿಲ್ಲಲು

ಮರಗಿಡ ಮುತ್ತಿಕ್ಕಿದ ಇಬ್ಬನಿ ಹನಿಯು
ನಾಚುತ ಕರಗಿ ನೀರಾಗಿ ಹರಿಯಲು
ವನದಲಿ ತುಂಬಾ ಒಲವಿನ ಗಾನವು
ನವಿಲು ಗರಿಗೆದರುತ ನಾಟ್ಯವಾಡಲು

ಗಗನವ ಮುಸುಕಿದ ಸಾಲು ಮೋಡವು
ಸೂರ್ಯನ ಕಂಡು ಮರೆಯಲಿ ಅಡಗಲು
ಕಚಗುಳಿಯಿಡುವ ಬಿಸಿಲದು ಚಂದವು
ಹೊನ್ನಿನ ಹೊಂಗಿರಣ ಭುವಿಗೆ ಸೋಕಲು

ಧರಣಿಯಲಿ ನೆಲೆಸಿದ ಜೀವಿ ಸಮೂಹ
ಚೈತನ್ಯವ ಪಡೆಯುತ ಉಲ್ಲಾಸ ತುಂಬಲು
ಭೂಮಿ ಇಬ್ಬನಿಯಲಿ ಮಿಂದು ಮಡಿಯು
ಸ್ವರ್ಗ ಸೌಂದರ್ಯ ತುಂಬಿ ತುಳುಕಲು


ಡಾ.ಸುಮತಿ ಪಿ

About The Author

Leave a Reply

You cannot copy content of this page

Scroll to Top