ಮುಂಜಾನೆ ಸೊಬಗು-ತಾಜುದ್ಧೀನ್ ಬೇತೂರ್(ಫಕೀರ)

ಕಾವ್ಯ ಸಂಗಾತಿ

ತಾಜುದ್ಧೀನ್ ಬೇತೂರ್(ಫಕೀರ)

ಮುಂಜಾನೆ ಸೊಬಗು

ಮುಂಜಾನೆಯ ಆ ಬೆಳಕಲಿ
ರವಿ- ಕಿರಣದ ಆ ಸೊಬಗಲಿ
ಹೊಸದೊಂದು ಜಗವನ್ನುನಾಕಂಡೆ

ಹಸಿರುಟ್ಟ ವನದೇವಿ ಸಿರಿಯಕಂಡೆ
ಗಿರಿ-ಶಿಖರ ಮೌನದ ಪರಿಯಕಂಡೆ
ಜುಳು-ಜುಳು ನೀರಿನ ಅಲೆಯ ಕಂಡೆ,ತಿಳಿನೀರ ಮಡುವಲ್ಲಿ ಈಜಾಡಿದೆ!
ವನದಲ್ಲಿ ನಲಿದಾಡೊ ಜಿಂಕೆಯ ಕಂಡೆ,ಪ್ರಕೃತಿಯ ಕಣ್ಣಾದ ನವಿಲ ಕಂಡೆ,ಗುಂಯ್ ಗುಡುವ ಜೇನಿನ ದಂಡ ಕಂಡೆ,ಸವಿಜೇನ‌ ಹೀರುತಾ ನಲಿದಾಡಿದೆ
ಹೊಲದಲ್ಲಿ ದುಡಿಯುವ ಜನರ ಕಂಡೆ,ಅವರೆದೆಯ ಹಾಡಿನ ಹೊನಲ ಕಂಡೆ, ಬದುವಲ್ಲಿ ಎದೆಯುಣಿಸೊ ತಾಯ ಕಂಡೆ, ಮಡಿಲಲ್ಲಿ ನಲಿದಾಡೊ ಮಗುವ ಕಂಡೆ!


ತಾಜುದ್ಧೀನ್ ಬೇತೂರ್(ಫಕೀರ)

3 thoughts on “ಮುಂಜಾನೆ ಸೊಬಗು-ತಾಜುದ್ಧೀನ್ ಬೇತೂರ್(ಫಕೀರ)

    1. ಕವಿ ತಾಜುದ್ದೀನ್ ಫಕೀರರು ಪ್ರಕೃತಿಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ.

Leave a Reply

Back To Top