ಶಾಂತಲಾ ಮಧು ಕವಿತೆ-ಸಾಸುವೆಗೆಹುಡುಕಾಟ

ಕಾವ್ಯ ಸಂಗಾತಿ

ಸಾಸುವೆಗೆಹುಡುಕಾಟ

ಶಾಂತಲಾ ಮಧು

ಸಾಸುವೆಯ ಹುಡುಕಾಟ
ಹಗಲ ಸಂತೆಯಲಿ
ಸಾಸುವೆಯ ಹುಡುಕಾಟ
ಇಲ್ಲುಂಟು ಅಲ್ಲುಂಟು
ಎಲ್ಲೆಲ್ಲು ಉಂಟೆಂದು

ಕಟ್ಟಿಕಣ್ಣಿಗೆ ಪಟ್ಟಿ
ಕಂಡದ್ದು ನಿಜವೆಂದು
ಹುಡುಕಾಟ ಸಾಸುವೆಗೆ
ಹುಡುಕಾಟ

ನಾಡಾಚೆ ಕಾಡಲ್ಲಿ
ಭೂಮಿಗಂಟಿ
ಆಕಾಶಕ್ಕೇರುವ
ಕನಸ ಹೊತ್ತ ಮರ
ಪೋಣಿಸಿದ ಮಣಿಯಂತಿರುವ ಬೇರು
ಫಳಫಳನೆ ಹೊಳೆವಕಾಂಡ
ನಿಲುಕದ ಹಸಿರೆಲೆಗಳ ಸಡಗರದ ತೇಲಾಟ

ಹುಡುಕಾಟ ಹುಡುಕಾಟ
ಸಾಸುವೆಯ ಹುಡುಕಾಟ
ಸಮುದ್ರ ತಟದಲ್ಲಿ
ಅಲೆಯ ಮೇಲೊಂದಲೆ
ಹಳೆಮರಳು
ಹೊಸ ಮರಳು
ತಡಕಾಟ ತಡಕಾಟ
ಹುಡುಕಾಟ ಸಾಸುವೆಗೆ
ಹುಣ್ಣಿಮೆಯ ರಾತ್ರಿಯಲಿ
ದನಿಗೆ ಒಳ ದನಿ ಅಲ್ಲಿ
ನಿನ್ನೊಳಗೆ ನೀ ಹುಡುಕು
ಪ್ರೀತಿ ಚೇತನ ಹುಡುಕು
ಹುಡುಕಾಟ
ಹುಡುಕಾಟ
ಸಾಸುವಗೆ
ಹುಡುಕಾಟ

————————————–

ಶಾಂತಲಾ ಮಧು

Leave a Reply

Back To Top