ಹನಿಬಿಂದು ಕವಿತೆ-ನಾವಲ್ಲ

ಕಾವ್ಯ ಸಂಗಾತಿ

ನಾವಲ್ಲ

ಹನಿಬಿಂದು

ಯಾರಿಗೋ ನೋವಾದಾಗ
ಕೊರಗದವರು ನಾವಲ್ಲ

ಯಾರಿಗೋ ತೊಂದರೆಯಾದಾಗ
ಮರುಗದವರು ನಾವಲ್ಲ

ಯಾರಿಗೋ ಕಷ್ಟ ಬಂದಾಗ
ಬೇಸರ ಪಡದವರು ನಾವಲ್ಲ

ಯಾರಿಗೋ ಬೇಡವಾದಾಗ
ಸಾಯುವವರು ನಾವಲ್ಲ

ಯಾರಿಗೋ ಬೇಸರವಾದಾಗ
ಖುಷಿ ಪಡುವವರು ನಾವಲ್ಲ

ಪರರ ಸುಖ ಸಂತೋಷವನ್ನು
ಕಿತ್ತು ಕೊಳ್ಳುವವರು ನಾವಲ್ಲ

ಯಾರದೋ ಕಣ್ಣಿನಿಂದ ನೆತ್ತರು ಸುರಿದರೂ
ಒರೆಸದೇ ಇರುವವರು ನಾವಲ್ಲ

ಯಾರದೋ ಕಣ್ಣೀರ ಧಾರೆಗೆ
ಕಾರಣರಾಗುವವರು ನಾವಲ್ಲ

ಯಾರದೋ ಬದುಕ ಸೋಲಿನ ಬೀಗಕ್ಕೆ
ಕೀಯಾಗುವವರು ನಾವಲ್ಲ

ಯಾರದೋ ನಾಳಿನ ಬಾಳಿಗೆ
ಕೊಳ್ಳಿ ಇಡುವವರು ನಾವಲ್ಲ.

—————————-

ಹನಿಬಿಂದು

Leave a Reply

Back To Top