ಬೆಳಕಾದ ಗುರುಗಳು ಈರಮ್ಮ.ಪಿ.ಕುಂದಗೋಳ

ಲೇಖನ ಸಂಗಾತಿ

ಬೆಳಕಾದ ಗುರುಗಳು

ಈರಮ್ಮ.ಪಿ.ಕುಂದಗೋಳ

ವರ್ಣ ಮಾತ್ರ0  ಕಲಿಸಿಧಾತಮ0 ಗುರು”
ಪ್ರಾಥಮಿಕ ಹಂತ ಮುಗಿಸಿ ಪ್ರೌಢ ಶಾಲೆಗೆ ಬಂದಾಗ ಜೀವನದ ಮುಖ್ಯ ಹಂತ ಇದಾಗಿದ್ದು,ಅಲ್ಲಿಯ ಗುರುಬಳಗ ಕೊಟ್ಟ ವಿದ್ಯೆ ಪ್ರತಿಯೊಬ್ಬ ವಿದ್ಯಾರ್ಥಿಗೆ ದಾರಿದೀಪ ಹಾಗೂ ಮರೆಯಲಾಗದ ಸವಿನೆನಪು. ಇಂತಹ ಗುರುಗಳ ಕೈಯಲ್ಲಿ ಕಲಿಯುವುದೆಂದರೆ ಅದೆಷ್ಟು ಪುಣ್ಯ ಅಷ್ಟೇ ಅಲ್ಲ” ಹರ ಮುನಿದರು ಗುರು ಕಾಯುವನು”.ನಾವು ಎಂತಾ ಸಾಧನೆ,ಕಾರ್ಯ ಮಾಡಬೇಕಾದಗ ಬರುವ ಕಠಿಣ ಸಮಸ್ಯೆಗಳು ಬಂದಾಗ ಹರನಿಗಿಂತ ಗುರು ಇದ್ದರೆ ಆ ವೈಕ್ತಿ ಯಶಸ್ವಿಯಾಗುವಲ್ಲಿ ಯಾವ ಸಂಶಯವೂ ಇಲ್ಲ.ಎಲ್ಲಾ ವಿಷಯಗಳನ್ನು ಭೋಧಿಸಿ ನೀತಿಪಾಠ ಕಲಿಸಿ ಜೀವನಾಮೃತವನ್ನು ಉಣಬಡಿಸುವರು ಈ ಗುರುಗಳು. ಅದೆಷ್ಟು ಇವರ ಬಗ್ಗೆ ವರ್ಣಿಸಿದರು ಪದ ಸಾಲದು.
       “ತನು ಕನ್ನಡ ಮನ ಕನ್ನಡ
        ನುಡಿ ಕನ್ನಡ ಸರ್ವಸ್ವವೂ ಕನ್ನಡ”

ಎಂದು ನಮ್ಮ ನಾಡು ನಮ್ಮ ಭಾಷೆ ನಮಗೆ ಹೆಮ್ಮೆ ಎಂದು ಮಾತೃ ಭಾಷೆ ‘ಕನ್ನಡ  ಹಿರಿಮೆಯ ಬಗ್ಗೆ,
ಕನ್ನಡ ನಾಡುನುಡಿಯ ಬಗ್ಗೆ ಬೋಧಿಸಿದ ಡಾ/ ಎಂ ಎಲ್ ಪೊಲೀಸ್ ಪಾಟೀಲ ಗುರುಗಳು,

     “ಹಕ್ಕಿಗಳ ಹಾಡಿಗೆ ಧ್ವನಿಯಾಗುವಾಸೆ
      ಗುರುಗಳ ಪಾಠಕ್ಕೆ ತಲೆದೂಗುವಾಸೆ”

ಆಂಗ್ಲ ಭಾಷೆ ಕಲಿಸಿದ ಲಕ್ಕನಗೌಡ್ರು ಗುರುಗಳು
ಸಮಾಜ ಇತಿಹಾಸ ಭೋಧಿಸಿ ಸಮಾಜದ ಬಗ್ಗೆ ತಿಳಿಹೇಳಿದ  ಪಂಪಯ್ಯ ಸರ್.
ಇಡೀ ಭೂಮಿಯ ಬಗ್ಗೆ ಪರಿಚಯಿಸಿ ವಿಜ್ಞಾನ ವಿಷಯ  ಹೇಳಿಕೊಟ್ಟ ನನ್ನ ನೆಚ್ಚಿನ ಪಿ.ವಿ.ಹಿರೇಮಠ ಗುರುಗಳು,
ಹಾಗೆಯೇ ತಲೆಯೇ ಮೇಲೆ ಕೈಯಾಡಿಸಿ ಆತ್ಮವಿಶ್ವಾಸ ಹೆಚ್ಚಿಸಿ ಜೀವಶಾಸ್ತ್ರ ಹೇಳಿಕೊಟ್ಟ ಕುರುಡಗಿ ಗುರುಗಳು,ಅವರು ಹೇಳುವ ಒಂದು ಮಾತು ನೆನಪಾಗುವುದು’ ಶಾಲೆಗೆ ತಡವಾಗಿ ಬರುವ ಮಕ್ಕಳಿಗೆ ಹೈದ್ರಾಬಾದಿ ಮಕ್ಕಳು ‘ಅಂತ ಬೈಯುವ ಶಬ್ದ ಇನ್ನು ಇಗೂ ಕಿವಿಯಲ್ಲಿ ಗುಯು ಎನ್ನುತಿದೆ. ನಿಜಕ್ಕು ಅವರು ಹೇಳಿದ ಮಾತು ಸುಳ್ಳು ಆಗಲಿಲ್ಲ ಇವತ್ತು ನಾವು ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ ಓದಿರುವ ಎಲ್ಲಾ ಮಕ್ಕಳು ಸರಕಾರಿ ಕೋಟಾದಲ್ಲಿ “ಹೈದ್ರಾಬಾದ್ ಕರ್ನಾಟಕ’ಅಂತ ಮೀಸಲಾತಿ ಪಡೆದಿದ್ದು ಇದಕ್ಕೆ ನಾವೇ ಉದಾಹರಣೆ ಅಂದರೆ ತಪ್ಪಾಗಲಿಕ್ಕಿಲ್ಲ.ಅದಕ್ಕೆ ಹೇಳೋದು ಗುರು ಹೇಳಿದ ಮಾತು ಸತ್ಯ ಅಂತ ನಾವು ಈಗಲೂ ನಂಬಿ ಅವರನ್ನು ಪೂಜಿಸುತ್ತವೆ.
ಹಾಗೆ ಅದೆಷ್ಟು ತಲೆ ಕೆಡಿಸಿಕೊಂಡರು ಲೆಕ್ಕಕ್ಕೆ ಸಿಗದ ಲೆಕ್ಕ ಹೇಳಿಕೊಡುತ್ತಿದ್ದ ನಮ್ಮ ಎಲ್ಲಪ್ಪಗೌಡ್ರು ಸರ್ ಗಣಿತವನ್ನು ಭೋಧಿಸುವಾಗ ಎಲ್ಲರೂ ತಲೆ ಕೆರದುಕೊಳುತ್ರಾ ನಕ್ಕು ನಲಿಯುತ್ತಿದ್ದೆವು ಅದಿನ
ಮರೆಯಲಾಗದ ಸವಿ ನೆನಪು. ಪಾಠ,ಓದು,ಬರಹ,ಆಟ, ಭಾಷಣ ಸ್ಪರ್ಧೆ,ಚರ್ಚಾ ಸ್ಪರ್ಧೆ,ರಂಗೋಲಿ, ಹಾಡು, ನೃತ್ಯ,ಕಥೆ ಒಂದಾ ಎರಡಾ ಹಬ್ಬಾ ಎಲ್ಲಾ ಚೆಟುವಟಿಕೆ ಯಲ್ಲಿ ಭಾಗಿಯಾಗಿ ಪ್ರಶಸ್ತಿ ತಂದ ಆ ಘಳಿಗೆ ಇಗೂ ಮೆಲುಕು ಹಾಕುವಂತೆ ಮಾಡಿದೆ. ಅಷ್ಟೇ ಅಲ್ಲದೆ  ‘A sound mind in a sound body”  (ಸದೃಢವಾದ ದೇಹದಲ್ಕಿ ಸದೃಢವಾದ ಮನಸ್ದು ನಿರ್ಮಾಣವಾಗುತ್ತೆ) ಎಂದು ದೈಹಿಕವಾಗಿ ನಮ್ಮನ್ನು ಬಲಿಷ್ಠಗೊಳಿಸಿ ಆಟ ಆಡಿಸಿ ,ಪ್ರೋತ್ಸಾಹಿಸಿ ತಾಲೂಕು ,ಜಿಲ್ಲಾ, ರಾಜ್ಯ ಮಟ್ಟದ ಕ್ರೀಡೆಗೆ ಹೆಸರುವಾಸಿ ಮಾಡಿದ  ನಮ್ಮ ದೈಹಿಕ ಶಿಕ್ಷಕರಾದ ಕಲ್ಗುಡಿ ಗುರುಗಳು ನೆನಪಾದ ಈ ದಿನ ಅದೆಷ್ಟು ಮನಸ್ಸಿಗೆ ಖುಷಿ ಕೊಟ್ಟಿತ್ತು.
     ಹಾಗೆಯೇ ಎಲ್ಲಾ ಚೆಟುವಟಿಕೆಗಳಿಗೆ ಬಣ್ಣ,ಜೀವ ತುಂಬಿ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ಮಲ್ಲಪ್ಪ ಹೋರಿ ಗುರುಗಳನ್ನು ಅಂತೂ ಮರೆಯುವಂತಿಲ್ಲ.ಅವರು ಕಲಿಸಿದ ಜಾನಪದ, ಗೀಗೀಪದ, ಭಾವಗೀತೆ,ದೇಶಭಕ್ತಿ ಗೀತೆ ಹೀಗೆ ಅದರಲ್ಲೂ ಒಂದು ಮರೆಯಲಾಗದ ಹಾಡು ಅಂದ್ರೆ ಗೀಗೀಪದ  ನೆನಪಾಗುತ್ತೆ ಅದು  ಯಾವುದೆಂದರೆ ಈ ಕೆಳಗಿನಂತಿದೆ ನೋಡಿ.

ಗೀಗಿ ಪದ

  ಗೀಯ ಗಾ ಗಿಯ ಗಾ ಗಿಯ ಗಿಯ ಗಾ$$$$$$
ತಳವಾರಿಗೊಂದು ಬಡಿಗಿ ಬೇಕಾ
ಅಡಿಗೆ ಮನೆಗೊಂದು ಹುಡಿಗಿ ಬೇಕಾ
ಹುಡುಗಿಗೊಂದು ಗಡಿಗಿ ಬೇಕಾ ಅಡಿಗಿ ಮಾಡಕ.!$$$

ಹೋಳಿಗಿ ಮಾಡಕ ಎಳ್ಳು ಬೇಕಾ
ದಂಧೆ ಮಾಡಕ ಸುಳ್ಳು ಬೇಕಾ
ಸೊಳ್ಳಿ ಬೇಕಾ ಮಂದಿನೆಲ್ಲಾ ನಿದ್ದಿ ಕೆಡಿಸಕಾ!$$$$$

ಗುಡಿಯಾಗೊಂದು ಘಂಟಿ ಬೇಕಾ
ಎಲೆಕ್ಷನ್ ಗೆ ನಿಂತರೆ ಗಂಟ ಬೇಕಾ
ಶುಂಠಿ ಬೇಕಾ ನೆಗಡಿ ಬಂದ್ರೆ ಕಾಸಗೊಂಡು ಕುಡಿಯಾಕ$$$

ಶಿವಧಾರಕ್ಕೊಂದು ಪಟ್ಟ ಬೇಕಾ
ಜವಿವಾರಕ್ಕೊಂದು ಜುಟ್ಟ ಬೇಕಾ
ಕಟ್ಟಿ ಬೇಕಾ ಖಾಲಿ ಮಂದಿಗೆ ಪಂಟ ಹೊಡಿಯಾಕ!$$$$

ಮಸೂತಿಗೊಬ್ಬ ಅಲ್ಲಾ ಬೇಕಾ
ಅಡಿಗೆಗೆ ಹಾಕಕ ಅಲ್ಲ ಬೇಕಾ
ಬೆಲ್ಲ ಬೇಕಾ ಕಡಕಲ ನಾಯಿಗೆ ಸುಮ್ನೆ ಇರಿಸಾಕ!$$$

ಲೇಡಿಗೊಂದು ಪರಸು ಬೇಕಾ
ಮಲಗಾಕ್ಕೊಂದು ವರಸು ಬೇಕಾ
ಹೊಸದೊಂದು  ಹೊರುಷ ಬೇಕಾ ಬೇಕಾ ಹರುಷದಿ ನಲಿಯಾಕ! $$$

ಗಿಯ ಗಿಯ ಗಾ ಗಾಗಿಯಾ ಗಾ ಗಿಯ ಗಿಯ ಗಾ$$$

ನಿಜಕ್ಕೂ ಈ ಹಾಡು ಹಾಡುವಾಗ  ಹುಡುಗರು ಪಂಜೆ ಉಟ್ಟುಕೊಂಡು ,ಹುಡಿಗಿಯರು ಸಿರೇ ಉಟ್ಟುಕೊಂಡು
ಆ ಹಳ್ಳಿಯ ಸಂಸ್ಕೃತಿ ಯಲ್ಲಿ ಕಾಣಿಸಿಕೊಂಡಿದ್ದು ಅಷ್ಟೇ ಅಲ್ಲ ಈ ಹಾಡು ಹಾಡಿದ ವಿಶೇಷ ದಿನ ನೆನಪಾಗುತ್ತೆ ಅವತ್ತು ನಮ್ಮೂರು” ಅಳವಂಡಿಯ ಹೊಸ ಬಸ್ ಸ್ಟ್ಯಾಂಡ್ ಓಪನಿಂಗ್” ದಿನ ಹಾಡಿ ಊರಿನ ಜನರ ಮನಸ್ಸು ಗೆದ್ದು ಪ್ರಶಸ್ತಿ, ಗೌರವ ತಂದಿತ್ತು ಇನ್ನು ಮರೆತ್ತಿಲ್ಲ.ನೆನೆಸಿಕೊಂಡರೆ ಖುಷಿಯ ಜೊತೆಗೆ ಕಣ್ಣೀರು ಬರುತ್ತೆ. ಆ ವಿದ್ಯಾರ್ಥಿ ದಿನಗಳು ಅದೆಷ್ಟು ಚಂದ ಆನಂದ.ಅದಕ್ಕೆ ಹೇಳೋದು ಅಲ್ವಾ
“Student life is Golden life”
           ಅಂತ ಯಾವ ಚಿಂತೆ ಇಲ್ಲದೆ ಓದು ಒಂದೇ ಅಭ್ಯಾಸ  ಅಷ್ಟೇ ಇರುತ್ತದೆ. .”ವಿದ್ಯೆ,ವಿನಯ,ಧ್ಯಾನ,ಏಕಾಗ್ರತೆ,ಅಭ್ಯಾಸ ಎಂಬ ಐದು ಒಡವೆಗಳು ವಿದ್ಯಾರ್ಥಿಗಳಿಗೆ ಭೂಷಣವೆಂಬಂತೆ ಬೋಧಿಸಿದ ಗುರುಬಲಗವನ್ನು ಮರೆಯವಾರೆವು.
ಅಷ್ಟೇ ಅಲ್ಲ


“ಅರಿವಿನ ಗುರುಮೊರೆಯ
ತಿಳಿಯೊಂದು ಒಡೆಯ”

    ಅಷ್ಟೇ ಏಕೆ ಅದೇ ಶಾಲೆಯಲ್ಲಿ ಮುಂದುವರೆದು ಪಿ ಯು ಸಿ ಓದಿದೆವು.ಶಿಕ್ಷಣವೇ ಶಕ್ತಿಯೆಂದು ಸಾರಿದ ಪ್ರೊ ಎಂ ಎಸ್ ಹೊಟ್ಟಿನ ಗುರುಗಳು ಹೇಳಿದ ಶಿಕ್ಷಣಶಾಸ್ರ್ತ ಇವತ್ತಿಗೂ ನೆನಪಾಗುತ್ತೆ. What is education?  ಅಂತ ಪ್ರಶ್ನೆ ಕೇಳಿದಾಗ Life is  Education, Education is life. ಉತ್ತರವನ್ನು ಮರೆಯುವಂತಿಲ್ಲ.
ಹಾಗೆಯೇ ಮಾನವ ಸಂಘ ಜೀವಿ ಸಮಾಜದ ಜೊತೆ ಸಹಬಾಳ್ವೆ ಮಾಡಬೇಕು ಅಂತ ಸಮಾಜಶಾಸ್ತ್ರ ಬೋಧಿಸಿದ ನನ್ನ ನೆಚ್ಚಿನ ಗುರುಗಳು ಪ್ರೊ/ಎ. ಟಿ.ಕಲ್ಮಠ ಸರನ್ನು ಮರೆಯುವಂತಿಲ್ಲ.ಹೀಗೆ ಹಲವು ವಿಷಯಗಳನ್ನು ಕಲಿತು ಎಲ್ಕಾ ಲೆಕ್ಕ ಹಾಕಿ ಲೆಕ್ಕಣಿಕೆ ಬರೆಯುವ ಬಸವರಾಜ ಕಲಾದಗಿ ಗುರುಗಳನ್ನು ಮರೆಯಲಾಗದು.
ಈ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ತಿಳಿಸಿ ಅನುಭವ ಸಾರ ತಿಳಿಸಿ  ಬದುಕನ್ನು ಅತ್ಮಸಾಕ್ಷಾತ್ಕಾರವನ್ನ ಮಾಡಿಕೊಟ್ಟ  ಜೀವನವನ್ನು ಪೌರ್ಣಿಮೆ ಮಾಡಿದ ನನ್ನ ಎಲ್ಲಾ ನೆಚ್ಚಿನ ಗುರುಗಳಿಗೆ “ಗುರು ಪೂರ್ಣಿಮೆಯ ದಿನದ ಹಾರ್ದಿಕ ಶುಭಾಶಯಗಳು”.
ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಗುರುಗಳೇ.
ಇಂತಿ ನಿಮ್ಮ ವಿದ್ಯಾರ್ಥಿ..


ಈರಮ್ಮ.ಪಿ.ಕುಂದಗೋಳ

Leave a Reply

Back To Top