ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ
ಗಜಲ್
ಆಂತಕದ ಛಾಯೆ ಮನದೊಳಗೆ ಬಿರುಗಾಳಿ ಎಬ್ಬಿಸಿದೆ ಅವಳಿಲ್ಲದೆ |
ಸಹನೆ ಭಾವ ಭಾರವಾಗಿದೆ ಒಳಗೊಳಗೆ ನೋವಿಸಿದೆ ಅವಳಿಲ್ಲದೆ ||
ಬರಪೂರ ಜೀವನ ಅದೆಂಥ ದೃಶ್ಯ ನಾಟಕ ಕಾರಣವೇ ಬೇಕಿಲ್ಲ |
ನಟ್ಟನಡು ಹಾದಿಯಲಿ ನೆರಳಿನ ಚೆಲ್ಲಾಟ ಸಂಧಿಸಿದೆ ಅವಳಿಲ್ಲದೆ ||
ಎದೆಯ ಇರಿತವ ಸಹಿಸಿಬಹುದು ಇಲ್ಲವೆಂದೂ ನಿಜ ಹೇಗೆ ಹೇಳಲಿ |
ಸ್ಪಂದನಾ ಹೃದಯಕೆ ನಿದ್ದೆಯ ಮಂಪರು ಆವರಿಸಿದೆ ಅವಳಿಲ್ಲದೆ ||
ಕನಸುಗಳ ಕಣ್ಣ ಬಜಾರಿನಲಿ ತರತರ ನೋಟ ತುಂಬಿಕೊಳ್ಳಲೇ |
ಉರಿವ ಕಿಚ್ಚಿನಂತೆ ಮನಸಿನ ತೊಳಳಾಟ ಬೇಯಿಸಿದೆ ಅವಳಿಲ್ಲದೆ ||
ಮೌನ ಜಾಗದಲಿ ಉಸಿರು ಸಲ್ಖಿಸುವ ಅನುಮಾನದ ಹುತ್ತ ಗೊತ್ತೆ
ನೋವಿನ ಒಲವಿನ ‘ಮುತ್ತು’ ಉಸಿರ ಗಾನ ನಿಲ್ಲಿಸಿದೆ ಅವಳಿಲ್ಲದೆ ||
ಮುತ್ತು ಬಳ್ಳಾ ಕಮತಪುರ