ತಾತಪ್ಪ ಕೆ.ಉತ್ತಂಗಿ ಕವಿತೆ-ತಿರಸ್ಕಾರ

ಕಾವ್ಯ ಸಂಗಾತಿ

ತಾತಪ್ಪ ಕೆ. ಉತ್ತಂಗಿ

ತಿರಸ್ಕಾರ

ಅಳುಕು ಬಳುಕಿನ ತಳುಕಿನ
ಮನದಲ್ಲಿ ನಿನ್ನ ಮೌನದ
ಉಸಿರಿನೆಜ್ಜೆಗಳು
ಕಂಪಿಸುತ್ತಿವೆ ಎನ್ನೆದೆಯೊಳಗೆ

ನಿನ್ನ ಪ್ರತಿ ತುಟಿಯಂಚಿನ
ಹಿಂಬದಿಯ ಜಾಣ
ಮೌನಾಂತರದಲ್ಲಿ ತುಂಬಿದೆ
ನಿರುತ್ತರದ ಛಾಯೆ.

ವಿರಳ ವಿರಹ ,
ವಿರಾಮದ ವಿಹಾರಕ್ಕೆ
ಹಪಹಪಿಸಿದೆ ನಿನ್ನ
ಗುಮ್ಮನೆಯ ಗಟ್ಟಿ
ಗೂಢಾರ್ಥದ ಇಬ್ಬನಿ.

ಹೇ ಪ್ರೇಮಸಖಂಧರೆ
ನಿನ್ನ ಪ್ರತಿ ತಿರಸ್ಕಾರವೂ
ವೈರಾಗ್ಯದ ಆಡಂಬರ
ನಿನ್ನ ಪ್ರತಿ ಮೌನವೂ
ಪ್ರೇಮವಿರಾಗಿಯ
ನಿಲುಕದಂಬರ

ತಿರಸ್ಕಾರಕ್ಕೊಂದು
ಇಲ್ಲವೇ ,,ಎಲ್ಲೆ?
ಇದ್ದರೆಷ್ಟು ಚೆಂದ..
ಬಾಳಿಗೊಂದು ಸಿಗುವಳು
ಅರ್ಥಪೂರ್ಣ ನಲ್ಲೆ..

ತಿರಸ್ಕಾರದಿಂದ
ಪ್ರತೀಕಾರ…
ಪ್ರತೀಕಾರದಿಂದ
ಒಲವಿನ ಬದುಕಿನ
ಹಾಹಾಕಾರ ..
ಪ್ರೇಮಸ್ವೀಕಾರದ
ಹುಡುಕಾಟದಲ್ಲಿ ಕೊನೆಗೂ
ಸಿಕ್ಕಿದ್ದು ತಿರಸ್ಕಾರದ ಪುರಸ್ಕಾರ..


ತಾತಪ್ಪ ಕೆ. ಉತ್ತಂಗಿ

14 thoughts on “ತಾತಪ್ಪ ಕೆ.ಉತ್ತಂಗಿ ಕವಿತೆ-ತಿರಸ್ಕಾರ

  1. ನಲುಮೆಯ ಸಂಗಾತಿಯ ಬಗ್ಗೆ ಈ ನುಡಿಗಳು ಅರ್ಥಪೂರ್ಣವಾಗಿದೆ

  2. ಯಾರ ತಿರಸ್ಕಾರಕ್ಕೆ ಈ ಹಾಹಾಕಾರ? ಕವಿತೆ ಮನೋಜ್ಞ……

Leave a Reply

Back To Top