ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಸಂಬಂಧವ ಮುರಿಯದಿರು ನಾ ನಿನ್ನ ನಶೆಯಲಿರುವೆ
ಕಾಣುತಿಹ ಕನಸ ಕಲುಕದಿರು ನಾ ನಿನ್ನ ನಶೆಯಲಿರುವೆ
ನಿನ್ನ ಚಂದನದ ಮೂರ್ತಿಯ ಚಿತ್ತದಿ ಸ್ಥಾಪಿಸಿರುವೆ ಖರೆ
ಆ ಮೂರ್ತಿಯ ಕದಲಿಸದಿರು ನಾ ನಿನ್ನ ನಶೆಯಲಿರುವೆ
ನಿನ್ನ ಸನಿಹ ದೊರೆಯದೆ ಕುಂದಿ ಹೋಗಿರುವೆ ನಿಜದಿ
ಬರೀ ಮಾತಲಿ ಓಲೈಸದಿರು ನಾ ನಿನ್ನ ನಶೆಯಲಿರುವೆ
ದ್ವಂದದಿ ಸಿಲುಕಿರುವೆ ನೀನು ನಂಬದೆ ನನ್ನ ಪ್ರೇಮವ ಸಖಿ
ವಿಧಿಯ ಸದಾ ಜರಿಯದಿರು ನಾ ನಿನ್ನ ನಶೆಯಲಿರುವೆ
ರಮ್ಯ ಭಾವದ ಆಧಾರದಲಿ ಜೀವ ಹಿಡಿದಿಟ್ಟಿರುವೆ ತಿಳಿ
ಕೃಷ್ಣಾ! ಬೇರಾರ ಪೊರೆಯದಿರು ನಾ ನಿನ್ನ ನಶೆಯಲಿರುವೆ.
ಬಾಗೇಪಲ್ಲಿ