ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್

ಸೃಷ್ಟಿಯ ವೈಚಿತ್ರ್ಯ ಪ್ರಕೃತಿಯಾಗಿ ಮೇಳೈಸಿಬೀಗುತಿದೆ ಇಲ್ಲಿ
ವೃಷ್ಟಿಯ ಸುರಿಸಿ ಗಿಡಮರಗಳು ಹಸಿರ ತೂಗುತಿದೆ ಇಲ್ಲಿ

ವರುಣನ ಅಬ್ಬರಕೆ ವಾತಾವರಣ ಮಂಜು ಮುಸುಕಿದಂತೆ ಭಾಸವಾಗುತ್ತಿದೆಯಲ್ಲವೇ
ತೋರಣ ಕಟ್ಟುತ ಅತಿಥಿಯ ಬರವಿಗಾಗಿ ಬಾಗುತಿದೆ ಇಲ್ಲಿ

ದಾರಿಯ ನಡುವೆ ಅಂದಚೆಂದದ ಕಲ್ಲುಗಳ ಮೆಟ್ಟಿಲನ್ನು ಹಾಸಿದಂತಿದೆ
ಝರಿಯೊಂದು ಜಾರಿ ಬೆಟ್ಟದ ತಪ್ಪಲಿಂದಸಾಗುತಿದೆ ಇಲ್ಲಿ

ಗಾಳಿಯ ರಭಸಕೆ ತರಗೆಲೆಗಳು ಉದುರಿ ಚೆಲ್ಲಾಪಿಲ್ಲಿಯಾದಂತೆ ಕಾಣುತಿದೆ
ಬಿಳಲುಗಳು ವೇಗದಿ ಧರಾಶಾಹಿಯಾಗಿ ಕೂಗುತಿದೆ ಇಲ್ಲಿ

ಮುಂಗಾರಿನ ನಿರೀಕ್ಷೆ ರಾಧೆಯಲಿ ಮೈತಳೆದು ನವಿರು ಕಂಪನ
ಸಂಗಾತಿಯ ಸನಿಹದಲಿ ಒಲವಿನ ಬಯಕೆ ನೀಗುತಿದೆ ಇಲ್ಲಿ


ಅನುರಾಧಾ ರಾಜೀವ್ ಸುರತ್ಕಲ್

One thought on “ಅನುರಾಧಾ ರಾಜೀವ್ ಸುರತ್ಕಲ್-ಗಜಲ್

Leave a Reply

Back To Top