ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜೀವನದ ಕ್ರಿಕೆಟ್ಟು

ಚಂದಕಚರ್ಲ ರಮೇಶಬಾಬು

ನೆಲದಲ್ಲಿ ಎದೆ ಸೆಟೆಸಿ‌‌ ನಿಂತ
ನ್ಯಾಯ,ನೀತಿ, ಧರ್ಮಗಳೆಂಬ
ಮೂರು ಸ್ಟಂಪುಗಳ ಕಾರ್ಯಕ್ಷೇತ್ರ ಆಟಗಾರನದು

ಅರಿಷಡ್ವರ್ಗಗಳೆನ್ನುವ
ಆರು ಎಸೆತಗಳನ್ನು
ಬೀಸುವುದು ಜೀವನ

ಗಳಿಸಿದ ಓಟಗಳು
ಗಳಿಸಿದ ಸಾಧನೆಗಳು
ಬೀಗುವ ಕ್ಷಣಗಳು

ಜೊತೆಯಾಟಗಾರನ
ಪಯನವೆಲ್ಲಿಯ ವರೆಗೋ
ಎಂದು ಹಿಂದಿರುಗುವನೋ

ಆಟಗಾರನ ಕೈಯಲ್ಲಿ
ದಾಂಡೆಂಬ
ವಿವೇಚನದ ಬಡಿಗೆ

ಎಸೆತಗಳೆಸೆಯುವ
ಆಮಿಷಗಳಿಗೆ ಕುಗ್ಗದೆ
ತಲೆ ತಗ್ಗಿಸದೆ

ಕೈಯಲ್ಲಿಯ ದಾಂಡಿನಿಂದ
ದೂರ ಅಟ್ಟುದಿದ್ದಷ್ಟೂ
ಬದುಕು ಬಲು ಹಿತ

ಎಲ್ಲಾದರೂ ಕಂಗೆಟ್ಟರೆ
ಜೀವನದ್ದೇ ಗೆಲುವು
ಆಟಗಾರನ ಅಳಿವು

———————


ಚಂದಕಚರ್ಲ ರಮೇಶಬಾಬು

About The Author

1 thought on “ಚಂದಕಚರ್ಲ ರಮೇಶಬಾಬು ಕವಿತೆ-ಜೀವನದ ಕ್ರಿಕೆಟ್ಟು”

  1. Shantalingappa Patil

    ಚೆನ್ನಾಗಿದೆ!
    …………..
    ಬದುಕು ಕ್ರಿಕೆಟ್
    ಜೀವನವೊಂದು ನಾಟಕ
    ಸಂಸಾರ ಎಂಬುದು ಸಂತೆಯ ಮಂದಿ ಕಾಣೋ
    ಅವರವರು ಕಂಡಂತೆ ಅವರವರ ಬದುಕು!

Leave a Reply

You cannot copy content of this page

Scroll to Top