ಕಾವ್ಯ ಸಂಗಾತಿ
ನಿನ್ನೊಲುಮೆ ಜೀವನ
ಸುಧಾ ಪಾಟೀಲ


ಒಲವಿನ ಮಾಲೆಯ
ಜತನದಿ ಹೆಣೆದು
ನೀ ತೊಡಿಸಿ ನಗಲು
ನಾನದಕೆ ಮರುಳಾಗಿ
ಜೀವನವೇ ಸಂಭ್ರಮಿಸಿತು
ಸಿಟ್ಟಿನಲೂ ಪ್ರೀತಿಯ
ತೋರುತ ಶಬ್ದಗಳ
ಮೋಡಿಯಲಿ ಮುಳುಗಿಸಿ
ಬರಸೆಳದಿ ಅಪ್ಪಲು
ಜೀವನವೇ ಸಂಭ್ರಮಿಸಿತು
ಬೇಸರದ ಮನದಲೂ
ನಗೆ ಉಕ್ಕಿಸಿ ಚಿಮ್ಮಿಸುವ
ಸದಾ ಹೊಗಳಿಕೆಯ
ಉತ್ತುಂಗಕ್ಕೇರಿಸುವ ದಿಸೆಯಲಿ
ನಾವಿಬ್ಬರೂ ಒಂದಾಗಿ
ಜೀವನವೇ ಸಂಭ್ರಮಿಸಿತು
ಮಳೆಗಾಲದ ಈ ಸಂಜೆ
ಸಾಗರದ ನಿನ್ನೀ ಒಲವಿನಲಿ
ಕಾಳಜಿಯ ನಿನ್ನೀ ನೋಟದಲಿ
ಪ್ರೇರಣೆಯ ನಿನ್ನೀ ಪಾಠದಲಿ
ಜೀವನವೇ ಸಂಭ್ರಮಿಸಿತು
ನನ್ನ ಪುಟ್ಟ ಲೋಕದಿ
ನೀನೊಬ್ಬನಾಗಿ ಮೆರೆದು
ಅಗಣಿತ ಸಂತೋಷವ ಹೊತ್ತು
ಹಿಡಿಯಲಾರದಷ್ಟು ಪ್ರೀತಿಹಂಚಿ
ಜೀವನವೇ ಸಂಭ್ರಮಿಸಿತು
ಜನುಮದ ಗೆಳೆಯನಾಗಿ
ಜೀವನದ ಸಾರವಾಗಿ
ಪ್ರೀತಿಯ ಹಣತೆಯಾಗಿ
ನೀ ಓಡೋಡಿ ಬರಲು
ಜೀವನವೇ ಸಂಭ್ರಮಿಸಿತು
ಸುಧಾ ಪಾಟೀಲ
Excellent poem Madam
ಧನ್ಯವಾದಗಳು ತಮ್ಮ ಮೆಚ್ಚುಗೆಗೆ..
ಸರ್