ಲಲಿತಾ ಮು ಹಿರೇಮಠ ಕವಿತೆ-ಮುಂಗಾರು ಮಳೆ

lalithakulakarni

ಕಾವ್ಯ ಸಂಗಾತಿ

ಮುಂಗಾರು ಮಳೆ

ಲಲಿತಾ ಮು ಹಿರೇಮಠ.

ಮುಂಗಾರು ಮಳೆಯ ಈ ಸ್ಪರ್ಶ
ಹಸಿ ಹಸಿರ ಸಿರಿಗೆ ತುಂತುರಿನ ಚೈತ್ರ
ಮಳೆಗಿಲ್ಲಿ ಗುಡುಗಿನ ಮಂತ್ರ
ಇದು ಆ ಸೃಷ್ಟಿಕರ್ತನಾ ತಂತ್ರ.

ಭುವಿತುಂಬ ಹಸಿರವನ ರಾಶಿ
ಸುತ್ತೆಲ್ಲವೂ ಹೂವಿನ ಕಾಶಿ
ಸೌಂದರ್ಯ ಸಿರಿಯು ಸುತ್ತೆಲ್ಲ ಹಾಸಿ
ಇದ ನೋಡುತಲಿ ನೋವೆಲ್ಲಮಾಸಿ.

ನಿನ್ನ ತುಂಟಾಟ ನಿಲ್ಲಿಸೇ ಮಳೆ ಹನಿ
ಆಗಾಗ ಬಂದೋಗೋ ಕಂಬನಿ ಹನಿ
ಜೋರಾಗಿ ಸುರಿಯೇ ನೀನಿಗಲೆ
ಭೂವಿಯಲ್ಲ ತಂಪಾಗಿಸು ಬಂದೀಗಲೇ.

ನೀನಿದ್ದರೆ ಕಳೆ ಈ ಸೃಷ್ಟಿಗೆ
ನೀನಾಗುತಾ ಜೀವಸೆಲೆ ವನ ರಾಶಿಗೆ
ಸಮಯ ಬಂದಾಗ ತಪ್ಪದೆ ಬಾ ಇಳೆಗೆ
ಕಾದಿಹೇನು ನಿನಗಾಗಿ
ಮತ್ತೊಂದು ಕವಿತೆ ನಾ ಬರೆಯಲು….


One thought on “ಲಲಿತಾ ಮು ಹಿರೇಮಠ ಕವಿತೆ-ಮುಂಗಾರು ಮಳೆ

Leave a Reply

Back To Top