ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ನಶ್ವರ ಜೀವನವಿದು ಬದುಕಬೇಕಿಲ್ಲಿ ಜೀವವು ಹೋಗುವತನಕ ನೀನು
ಯಮಧರ್ಮ ಸಂತಸದಲಿ ಬಾಯೆಂದು ಪ್ರೇಮದಿ ಕೂಗುವತನಕ ನೀನು

ಸತಿಸುತರ ಮೋಹದ ಬಲೆಯೊಳಗೆ ಇಲಿಯಂತೆ ಒದ್ದಾಡುತಿರುವೆ ಏಕೆ
ಅರಿಷಡ್ವರ್ಗಗಳ ಕಾಯವು ಅನುಭವದ ಮೂಸೆಯಲಿ ಮಾಗುವತನಕ ನೀನು

ಒಬ್ಬಂಟಿಯಾಗಿ ಹುಟ್ಟಿ ಜಗದೊಳು ಜಂಟಿಯಾದೆ ಸಖನೇ
ನಾನೆಂಬ ಮತ್ಸರವು ಮಸ್ತಕವೇರಿ ಅಹಂಕಾರದಿ ಬೀಗುವತನಕ ನೀನು

ಪಾಪಪುಣ್ಯದ ಬಡ್ಡಿಸಾಲದ ಲೆಕ್ಕವನು ಮುಗಿಸದೆ ಹೊರಟೆಯಲ್ಲ
ಧರಿಸಿದ ಅಧಿಕಾರದಿಂದ ಇಹಲೋಕ ಯಾತ್ರೆಯುಆಗುವತನಕ ನೀನು

ಅಭಿನವನ ನುಡಿಗಳನು ಆಲಿಸುತ ಸನ್ಮಾರ್ಗದಲಿ ನಡೆವೆಯಲ್ಲ
ಮರಣದ ತೊಟ್ಟಿಲಿನ ಮಗುವಾಗಿ ಕಂಬನಿದುಂಬಿ ತೂಗುವತನಕ ನೀನು


ಶಂಕರಾನಂದ ಹೆಬ್ಬಾಳ

Leave a Reply

Back To Top