ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ದರ್ಶನ ರಂಗನಾಥನ್

ಮಹಿಳಾ ವಿಜ್ಞಾನಿ ಮತ್ತು ರಸಾಯನಶಾಸ್ತ್ರ ಪ್ರವೀಣೆ

ದರ್ಶನ ರಂಗನಾಥನ್ (1941-2001)

ದರ್ಶನ ರಂಗನಾಥನ್ ಭಾರತ ಕಂಡ ಅತ್ಯಂತ ಉನ್ನತವಾದ ಮಹಿಳಾ ವಿಜ್ಞಾನಿ ಮತ್ತು ರಸಾಯನಶಾಸ್ತ್ರ ಪ್ರವೀಣೆ ಕೂಡ. ದರ್ಶನರವರು 1941ರಲ್ಲಿ ದೆಹಲಿಯಲ್ಲಿ ಜನಿಸಿದರು. ಇವರ ತಂದೆ ಶಾಂತಿಸ್ವರೂಪ್. ತಾಯಿ ವಿದ್ಯಾವತಿ ಮರ್ಕನ್. ಇವರು ಬೋಧನಾ ವಿಭಾಗದ ಸದಸ್ಯರಾಗಿದ್ದ ಸುಬ್ರಮಣಿಯ್ಯ ರಂಗನಾಥ ಅವರೊಂದಿಗೆ ವಿವಾಹವಾದರು. ಈ ದಂಪತಿಗಳಿಗೆ ಆನಂದ ಎಂಬ ಮಗನಿರುವನು.
ದರ್ಶನ ರಂಗನಾಥನ್ ಅವರು ದೆಹಲಿಯಲ್ಲಿ ಶಾಲಾ ಕಾಲೇಜು ವ್ಯಾಸಂಗ ಮಾಡಿದರು. ರಸಾಯನಶಾಸ್ತ್ರದಲ್ಲಿ ಪದವಿಯನ್ನು ಪಡೆದು ಉಪನ್ಯಾಸಕರಾಗಿ ಮಿರಾಂಡ ಹೌಸ್ ಸೇರಿದರು. ನಂತರ ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದರು. ದೆಹಲಿ ವಿಶ್ವವಿದ್ಯಾನಿಲಯದಿಂದ ಪ್ರೊಪೆಸರ ಟಿ. ಆರ್ ಶೇಷಾದ್ರಿ ಅವರ ಮಾರ್ಗದರ್ಶನದಲ್ಲಿ 1976 ರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದುಕೊಂಡರು. 1851ರಲ್ಲಿ ರಾಯಲ್ ಕಮಿಷನ್ ಫಾರ್ ದಿ ಎಕ್ಸಿಬಿಷನ್ ವತಿಯಿಂದ, ರಿಸರ್ಚ್ ಫೆಲೋಶಿಫ್ ಅನ್ನು ಪಡೆದರು. ಅಮೇರಿಕಾದಲ್ಲಿ ಸ್ನಾತಕೊತ್ತರ ಪದವಿಯನ್ನು ಇಂಟಿರಿಯಲ್ ಕಾಲೇಜು ಆಫ್ ಲಂಡನ್‍ನ ಫ್ರೊಪೆಸರ್ ಡಿ.ಎಚ್.ಆರ್. ಬಾರ್ಟನ್ ಅವರ ಮಾರ್ಗದರ್ಶನದಲ್ಲಿ ಪಡೆದುಕೊಂಡರು.
1969ರಲ್ಲಿ ಭಾರತಕ್ಕೆ ಮರಳಿದರು. ನಂತರ ಐ.ಐ.ಟಿ ಕಾನ್ಪುರದಲ್ಲಿ ಸ್ವತಂತ್ರ್ಯವಾಗಿ ಸಂಶೋಧನೆಯನ್ನು ಆರಂಭಿಸಿದರು. ದಂಪತಿಗಳಿಬ್ಬರು ಒಂದೇ ಇಲಾಖೆಯ ಅಡಿಯಲ್ಲಿ ಕೆಲಸವನ್ನು ನಿರ್ವಹಿಸಬಾರದು ಎಂಬ ಅಲಿಖಿತ ನಿಯಮಾನುಸಾರವಾಗಿ ದಂಪತಿಗಳಿಬ್ಬರು ಒಂದೇ ಕಡೆ ಕೆಲಸ ಮಾಡಲಿಲ್ಲ. ಹಾಗಾಗಿ ದರ್ಶನರವರು ಸಂಶೋಧನೆಗಾಗಿ ಸ್ವತಂತ್ರ್ಯವಾಗಿ ಧನಸಹಾಯವನ್ನು ಸಂಗ್ರಹಿಸುತಾ, ಪ್ರೋಟಿನ್ ಪೊಲ್ಡಿಂಗ್‍ನಲ್ಲಿ ಕೆಲಸ ಆರಂಭಿಸಿದರು. ಪತಿಯೊಂದಿಗೆ ಇಂಗಾಲಿಯ ರಸಾಯನಶಾಸ್ತ್ರದ ವಿಷಯಗಳ ಮುಖ್ಯ ಅಂಶಗಳನ್ನು ಸಂಗ್ರಹಿಸಿದರು. ದರ್ಶನರವರು ಸ್ವಯಂ ಆಗಿ ಪೆಪ್ಲೈಡ್ ಬಳಸಿಕೊಂಡು ವಿವಿಧ ನ್ಯಾನೋ ರಚನೆಗಳಿಗೆ ವಿವಿಧ ಪ್ರೋಟಿನ್ ವಿನ್ಯಾಸವನ್ನು ಕಂಡು ಹಿಡಿದರು.
1993ರಲ್ಲಿ ತಿರುವನಂತಪುರದಲ್ಲಿರುವ ಪ್ರಾದೇಶಿಕ ಸಂಶೋಧನಾ ಘಟಕದಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದೇ ಸಮಯದಲ್ಲಿ ಅಮೇರಿಕಾದ ನೌಕಾ ರೀಸರ್ಚ್ ಲ್ಯಾಬೋರೇಟರಿಯ ಇಸಾಬೆಲ್ಲಾ ಕಾರ್ಲೆ ಅವರ ಸಹಯೋಗದೊಂದಿಗೆ ಕೆಲಸ ನಿರ್ವಹಿಸಿದರು. 1998ರಲ್ಲಿ ಹೈದರಾಬಾದಿನಲ್ಲಿರುವ ಇನ್ಸಿಟ್ಯೂಟ್ ಆಫ್ ಕೇಮಿಕಲ್ ಟೆಕ್ನಾಲಾಜಿಯಲ್ಲಿ ನಿರ್ದೇಶಕರಾಗಿ ಆಯ್ಕೆಗೊಂಡರು.
ದರ್ಶನರವರು ಪ್ರಯೋಗಾಲಯದಲ್ಲಿ ನೈಸರ್ಗಿಕ ಬಯೋಕೆಮಿಕಲ್ ಪ್ರತಿಕ್ರಿಯೆಗಳನ್ನು ಮರುಸೃಷ್ಟಿಸುವುದರ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ದರ್ಶನರವರು ಔಷಧಿಯ ಮಹತ್ವವನ್ನು ಹೊಂದಿರುವಂತಹ ಹಿಸ್ಟಡಿನ್ ಮತ್ತು ಹಿಸ್ಟಮಿನ್‍ನ ಒಂದು ಪದಾರ್ಥದ ಇಮಿಡಜೋಲ್‍ನ ಸ್ವಾಯತ್ತ ಸಂತಾನೋತ್ಪತ್ತಿ ಪ್ರೋಟೋಕಾಲ್ ಅನ್ನು ಸೃಷ್ಟಿಸಿ ಯಶಸ್ವಿಯಾದರು. ‘ವರ್ಕಿಂಗ್ ಸಿಮ್ಯುಲೇಶನ್ ಆಫ್ ಯಾರಿಯ ಸೈಕಲ್’ ಅನ್ನು ಅಭಿವೃದ್ಧಿ ಪಡಿಸಿದರು.
‘ಜರ್ನಲ್ ಆಫ ಅಮೇರಿಕಾ ಕೆಮಿಕಲ್’ ಸೊಸೈಟಿಯಲ್ಲಿ 11 ಸಂಶೋಧನಾ ಪತ್ರಿಕೆಗಳನ್ನು ಮತ್ತು ‘ಜರ್ನಲ್ ಆಫ್ ಆಗ್ರ್ಯನಿಕ್ ಕೆಮಿಸ್ಟ್ರಿ’ಯಲ್ಲಿ 6 ಸಂಶೋಧನೆ ಪತ್ರಿಕೆಗಳನ್ನು ಸಂಪಾದಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಪತಿ ಸುಬ್ರಮಣಿಯ್ಯ ರಂಗನಾಥ ಅವರೊಂದಿಗೆ ಸಹಲೇಖಕರಾಗಿ ದರ್ಶನರವರು “ಚ್ಯಾಲೆಂಜಿಂಗ್ ಪ್ರಾಬ್ಲಮ್ ಇನ್ ಆರ್ಗಾನಿಕ್ ರಿಯಾಕ್ಷನ್ ಮೆಕ್ಯಾನಿಸಮ್ಸ್” ಮತ್ತು “ಆರ್ಟ್ ಇನ್ ಬಯೋಸಿಂತಸಿಸ್ ದ ಸಿಂತ್‍ಟಿಕ್ ಕೇಸ್ಟ್ರಸ್ ಚಾಲೇಂಜ್” ಹಾಗೂ “ಪರ್ದರ್ ಚಾಲೆಂಜಿಗ್ ಪ್ರಾಬ್ಲಮ್ಸ್ ಇನ್ ಅರ್ಗಾನಿಕ್ ರಿಯಾಕ್ಷನ್ ಮೈಕ್ಯಾನಿಸಮ್ಸ್ ಪುಸ್ತಗಳನ್ನು ಪ್ರಕಟಿಸಿರುವರು.
ಇವರು 1991ರಲ್ಲಿ ಇಂಡಿಯನ್ ಅಕಾಡಮಿಯ ಫೆಲೋಶಿಫ್‍ಗೆ ಆಯ್ಕೆಯಾದರು. ನಂತರ 1996ರಲ್ಲಿ ನ್ಯಾಷನಲ್ ಅಕಾಡಮಿ ಆಫ್ ಸೈನ್ಸನ್ ಫೆಲೋಶಿಫ್‍ನ್ನು ಪಡೆದರು.
1999ರಲ್ಲಿ ಜೈವಿಕ ಇಂಗಾಲಿಯ ರಾಸಾಯನಶಾಸ್ತ್ರದಲ್ಲಿ ತಾವು ಸಲ್ಲಿಸಿದ ಸೇವೆಗಾಗಿ ಎ. ವಿ ರಮಾರಾವ್ ಫೌಂಡೆಷನ್ ಅವಾರ್ಡ್ ಪಡೆದಿರುವರು.
2000ರಲ್ಲಿ ಜವಾಹರ್‍ಲಾಲಾ ನೆಹರು ಜನ್ಮ ಶತಮಾನೋತ್ಸವ ಸಂದರ್ಶಕ ಫೆಲೋಶಿಫ್ ಪಡೆದರು. 2000 ರಂದು ಇರಾನನಲ್ಲಿ ನಡೆದ ಥರ್ಡ ವಲ್ರ್ಡ್ ಅಕಡಮಿ ಆಫ್ ಸೈನ್ಸ್ ಇನ್ ಕೆಮೇಸ್ಟ್ರಿ (ಟಿ.ಡ್ಲೂ.ಎ.ಎಸ್) ಸಭೆಯಲ್ಲಿ ಪ್ರಶಸ್ತಿಯನ್ನು ಸ್ವಿಕರಿಸಿದರು. ಇಷ್ಟಲ್ಲದೆ ಸುಖದೇವ ಎನ್ಡೊಮೆಂಟ್ ಲೆಕ್ಚರ್ ಶಿಫ್‍ನ್ನು ಇವರು ಪಡೆದುಕೊಂಡಿದ್ದಾರೆ.
ದರ್ಶನ ರಂಗನಾಥನ್ ಅವರು ಸ್ತನ ಕ್ಯಾನ್ಸರಿಂದಾಗಿ ಜೂನ್ 4, 2001ರಲ್ಲಿ ತಮ್ಮ ಅರವತ್ತನೇಯ ವಯಸ್ಸಿಗೆ ಕೊನೆಯುಸಿರೆಳೆದರು.


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top