ರಜಿನಿ ಗೌಡ ಮಂಡ್ಯ ಕವಿತೆ-ಬಯಕೆಯ ಬವಣೆ

ಕಾವ್ಯ ಸಂಗಾತಿ

ಬಯಕೆಯ ಬವಣೆ

ರಜಿನಿ ಗೌಡ ಮಂಡ್ಯ

ತೀರದ ಬಯಕೆಯ ಜೊತೆ ಬದುಕುವ ಆಸೆ ಏಕೆ?
ಒಂದು ಬಯಕೆಯ ಹಿಂದೆ ಮತ್ತೊಂದು ಏಳುವುದು ಮೇಲಕೆ
ದುಃಖದ ಚಕ್ರಬಂಡಿಯ ಮೇಲೆ ಕುಳಿತು ತಿರುಗಿದಂತೆ
ಕಾಲತುತ್ತತುದಿಯಲ್ಲೇ ಬಯಕೆಗಳು ಬದುಕ ಸವೆಸುತ್ತವೆ

ಬಯಸಿ ಬಯಸಿ ಹೋದಷ್ಟು ಬದುಕು ಉಸಿಯಾಗುತ್ತದೆ
ಇರುವುದ ಬಯಸಿದರೆ ನಲಿಯುವುದು ಬದುಕು ಬಂದಂತೆ
ಬಯಕೆಯ ಜೊತೆಯಿದ್ದರೆ ಜೀವನ ಶುಷ್ಕ ನಿರರ್ಥಕವಾದಂತೆ
ಕಳೆದುಕೊಂಡಿದ್ದರ ಅರಿವೇ ಇಲ್ಲದೆ ಜೀವಿಸಬೇಕಾಗುತ್ತದೆ

ಒಂದರ ಬಯಕೆ ಹಿಂದೆ ಮತ್ತೊಂದು ಚಿಗುರುವುದಿಲ್ಲಿ
ಅದರ ಜೊತೆ ಜೊತೆಗೆ ಕಳೆದುಕೊಂಡಿದ್ದರ ಲೆಕ್ಕವೆಲ್ಲಿ
ಬಯಸಿ ಪಡೆಯುವುದಕ್ಕಿಂತ ಅರಸಿ ಬಂದದ್ದ ಗೌರವಿಸಿ
ಬದುಕ ಬದುಕುವ ಕಲೆಯಿದು ಬಯಕೆಯಲಿ ಬರಿದಾಗಬೇಡಿ

ಬಯಕೆಗಳ ಜೊತೆ ಬದುಕುವುದ ಮರೆತು ಬಿಡಿ
ಎಲ್ಲರಲ್ಲೂ ಹೊಕ್ಕಿ ಜ್ಞಾನದ ಬೆಳಕ ಹರಡಿ
ಜಗತ್ತೇ ಸಾತ್ವಿಕ ನರ್ತನ ಮಾಡಲು ಸ್ಪೂರ್ತಿಯಾಗಿ
ಬಯಸಿ ಬಯಸಿ ಬಯಕೆಯ ಜಾಲದಲ್ಲಿ ಮುಳುಗಬೇಡಿ

ಬಯಕೆಯು ಬೆಳೆಯುವುದು ಮುಳ್ಳಿನ ಬೇಲಿಯಂತೆ
ಬದುಕ ಆವರಿಸಿ ಚುಚ್ಚಿ ಚುಚ್ಚಿ ಕೊಲ್ಲುವಂತೆ
ಸಾಕಿನ್ನು ಬಯಕೆಗಳ ಜೊತೆ ಹೊಂದಾಣಿಕೆ
ಬದುಕು, ಬದುಕ ಬದುಕಿ ಬದುಕ ಜೊತೆ


ರಜಿನಿ ಗೌಡ ಮಂಡ್ಯ

Leave a Reply

Back To Top