ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಕಾಗುಣಿತ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಾಗುಣಿತ

ಜೀವನವು ಕನಸು
ನೋಡಿ ಬಿಡು
ಮುಂಜಾವಿನ ಮಂಪರು
ಎಲ್ಲವೂ ಮಸುಕು ಮಸುಕು

ಬಾಳೆಂಬುದು ಪಯಣ
ಮುಗಿಸಿ ಬಿಡು
ಮೆರವಣಿಗೆ ಮಸಣಕ್ಕೆ
ಕೊನೆಯ ದಾರಿ

ಬದುಕೆಂಬುದು ನಾಟಕ
ಆಡಿ ಬಿಡು
ಬಣ್ಣ ಬಣ್ಣದ ಪಾತ್ರ
ನೆಲದ ರಂಗ ಮೇಲೆ

ಸಂಸಾರ ಆಟದಲಿ
ನೀನೊಮ್ಮೆ ಆಡಿ ಬಿಡು
ಸೋಲು ಗೆಲುವಿನ
ಚಿಂತೆ ಮರೆತು

ಬದುಕೆಂಬುದು ಪರೀಕ್ಷೆ
ಎದುರಿಸು ನಗೆ ಹೊತ್ತು
ಜಯ ಅಪಜಯಗಳ
ಲೆಕ್ಕ ಮರೆತು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

11 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಕಾಗುಣಿತ

  1. ವಾಸ್ತವಿಕ ಸತ್ಯ ಸರ್. ಬದುಕನ್ನು ಬಂದಂತೆ ಅನುಭವಿಸಿ ಮುಗಿಸಬೇಕು.

  2. ಬದುಕಿನ ನೈಜ ಚಿತ್ರಣವನ್ನು ಸ್ವಾರಸ್ಯವಾಗಿ ಅಭಿವ್ಯಕ್ತಿಸಿದ್ದೀರಿ….

  3. ಭಾವಪೂರ್ಣ ಕವಿತೆ
    ಬದುಕಿನ ಪ್ರವಾಸ ಯಾನದ ಸುಂದರ
    ಅಭಿವ್ಯಕ್ತಿ

  4. ಬದುಕಿನ. ನಗ್ನ ಸತ್ಯ ಕೆ ಹಿಡಿದ ಕೈ ಗನ್ನ ಡಿ …. ಬಾಳ ಯಾನದ ಸಿಹಿ ಕಹಿಕಹಿಯ ಪಯಣದ ನವಿರಾದ
    ರು ನೆೀ ವರಿಕೆ..

  5. ಬೆರಳ ಸಂದುಗಳಲಿ ಸೋರಿಹೋಗುವ ಮುನ್ನ, ಹಿಡಿಯಷ್ಟು ಬದುಕನ್ನು ಸಾರ್ಥಕಗೊಳಿಸೆಂಬ ಬಾಳ್ದೀವಿಗೆ ಸರ್

Leave a Reply

Back To Top