ಕಾವ್ಯ ಸಂಗಾತಿ
ತರಹಿ ಗಜಲ್.
(ಹೈ. ತೋ. ಸರ್ ಅವರ ಮಿಸ್ರಾಕ್ಕೆ)
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್.
(ಹೈ. ತೋ. ಸರ್ ಅವರ ಮಿಸ್ರಾಕ್ಕೆ)
ಮಾತಿಲ್ಲದ ಮೌನಕ್ಕೆ ಮುತ್ತಿಟ್ಟಿರುವೆ
ಬಿತ್ತಿದ ಭಾವಗಳ ಬೆಳಕ ಬಚ್ಚಿಟ್ಟಿರುವೆ.
ನೀಡಿದ ನೋವುಗಳ ಲೆಕ್ಕ ಗೊತ್ತಿಲ್ಲ ನನಗೆ
ಎದೆಯ ಗಾಯಗಳನೆಲ್ಲ ಮುಚ್ಚಿಟ್ಟಿರುವೆ
ಅಳಿಸಿದ ಒಲವ ಬಣ್ಣಗಳು ಕೆಂಪಾಗಿವೆ
ಕನಸುಗಳ ಕಾಮನಂಬಿನಲಿ ಕಟ್ಟಿಟ್ಟಿರುವೆ
ನಡೆದ ದಾರಿಯ ನಗುವ ಪಯಣವದು
ನೆನಪ ಜೋಳಿಗೆಯ ತುಸು ಬಿಚ್ಚಿಟ್ಟಿರುವೆ
ಇಂದಲ್ಲನಾಳೆ ಬರುವ ಭರವಸೆಯ ಬೆಳಕಿದು
ಹಣತೆ ಹಚ್ಚಿ ಹೃದಯ ಕದವ ತೆರೆದಿಟ್ಟಿರುವೆ
ಚಂದಿರನ ಚೆಂಬೆಳಕ ನಗು ಇಂದುವಿನೆದೆ ತುಂಬ
ಜೊತೆ ನಡೆದ ಹೆಜ್ಜೆಗುರುತುಗಳ ಕಾಪಿಟ್ಟಿರುವೆ.