ಪ್ರಭಾ ಅಶೋಕ ಪಾಟೀಲ ಕವಿತೆ-ಬಾಲಕಾರ್ಮಿಕ

ಕಾವ್ಯ ಸಂಗಾತಿ

ಬಾಲಕಾರ್ಮಿಕ

ಪ್ರಭಾ ಅಶೋಕ ಪಾಟೀಲ

ಆಟವಾಡುವ ವಯಸ್ಸದು
ಕನಸು ಕಾಣೋ ಮನಸದು
ತೊತ್ತಿನ ಚೀಲ ತುಂಬಲದು
ದಣಿ ವ ರಿಯದೆ ದುಡಿಯುವುದು

ಬಡತನದ ಭವಣೆಯಲಿ
ಬಸವಳಿದು ಬೆಂಡಾದ ಜೀವನದಲಿ
ಗ್ಯಾರೆ ಮಣ್ಣು ಹೊರುತಲಿ
ಶಿಕ್ಷಣ ವಂಚಿತ ಮಗುವದು

ಬಾಲ ಕಾರ್ಮಿಕ ಎಂಬ ಹಣೆ ಪಟ್ಟಿಯಲಿ
ಪೋಷಕರ ಸಲಹುತಲಿ
ನಿತ್ಯ ನಿರಂತರ ಹೋರಾಟದಲಿ
ಬದುಕ ಸಾಗಿಸೋ ಹಠದಲಿ

ಅನಕ್ಷರತೆಯು ಅಳಿಯಲಿ
ಜ್ಞಾನ ಜ್ಯೋತಿಯು ಬೆಳಗಲಿ
ಶಾಲೆಗೆ ಹೋಗಿ ಶಿಕ್ಷಣ ಪಡೆಯಲಿ
ಬೆಳೆದು ಸನ್ಮಾರ್ಗದ ಸತ್ಪ್ರಜೆಯಾಗಲಿ

ಸರ್ಕಾರವದು ಎಚ್ಚೆತ್ತುಕೊಳ್ಳಲಿ
ಶಿಕ್ಷಣ ವ ದು ಕಡ್ಡಾಯವಾಗಲಿ
ಸೌಲಭ್ಯಗಳ ಹೊಳೆ ಹರಿಯಲಿ
ಅಕ್ಷರ ಜ್ಞಾನವು ತುಂಬಿ ಹೊಳೆಯಲಿ


Leave a Reply

Back To Top