ಪ್ರೊ. ಸಿದ್ದು ಸಾವಳಸಂಗ ಕವಿತೆ-ನಾನು ಬಡವ…

ಕಾವ್ಯ ಸಂಗಾತಿ

ನಾನು ಬಡವ…

ಪ್ರೊ. ಸಿದ್ದು ಸಾವಳಸಂಗ

ನಾನು ಬಡವ…
ಹರಿದ ಬಟ್ಟೆ ಧರಿಸಿ
ವಿದ್ಯಾಭ್ಯಾಸಕ್ಕಾಗಿ ಹಂಬಲಿಸಿದವ !!

ನಾನು ಬಡವ…
ಸಿರಿವಂತರ ದಬ್ಬಾಳಿಕೆಗೆ
ಮೂಕ ಬಲಿ ಪಶುವಾದವ !!

ನಾನು ಬಡವ…
ಅರೆ-ಬರೆ ಹೊಟ್ಟೆಯುಂಡು
ಕೂಲಿ-ನಾಲಿ ಮಾಡಿದವ !!

ನಾನು ಬಡವ…
ನಡೆಯಲಾರದೆ ಸೋತು
ಹಾದಿಯಲ್ಲಿ ಕೈ ಚೆಲ್ಲಿ ಕುಳಿತವ !!

ನಾನು ಬಡವ…
ವಾಸಕ್ಕೆ ಗುಡಿಸಲ್ಲಿಲ್ಲದೆ
ದೇವರ ಗುಡಿಯಲ್ಲಿ ಮಲಗಿದವ !!

ನಾನು ಬಡವ…
ಸಿರಿವಂತರು ಬೈದರೂ ಬೈಸಿಕೊಂಡು
ಎದಿರುತ್ತರ ಕೊಡದೆ ಅಸಾಯಕನಾದವ !!

ನಾನು ಬಡವ…
ನನಗೆ ಏನಿಲ್ಲದಿದ್ದರೂ
ರಾತ್ರಿ ಕನಸು ಕಾಣುತ ಮಲಗಿದವ !!


ಪ್ರೊ. ಸಿದ್ದು ಸಾವಳಸಂಗ,ತಾಜಪುರ


2 thoughts on “ಪ್ರೊ. ಸಿದ್ದು ಸಾವಳಸಂಗ ಕವಿತೆ-ನಾನು ಬಡವ…

  1. ಚಂದಾ ಇದೆ .
    ಬಡವನಾಗಲಿ ಶ್ರೀಮಂತನಾಗಲಿ
    ಕನಸಿಗೆ ಸ್ವಾತಂತ್ರ್ಯ ಇದ್ದೇ ಇರುತ್ತದೆ

Leave a Reply

Back To Top