ಎ. ಹೇಮಗಂಗಾ-ಜುಲ್ ಕಾಫಿಯಾ ಗಜಲ್

ಕಾವ್ಯ ಸಂಗಾತಿ

ಜುಲ್ ಕಾಫಿಯಾ ಗಜಲ್

ಎ.ಹೇಮಗಂಗಾ

ನನ್ನ ಕಣ್ಣೀರೆಲ್ಲವೂ ಕೊನೆಯಾಗುವುದಾದರೆ ಸಾವೇ ಬಂದುಬಿಡು
ನನ್ನ ನೋವೆಲ್ಲವೂ ಅಳಿಯುವುದಾದರೆ ಸಾವೇ ಬಂದುಬಿಡು

ನೆನಪುಗಳ ಶರಪಂಜರದಿ ಬಂದಿಯಾಗಿ ಮನಸು ನರಳಿ ಕೆರಳಿದೆ
ನನ್ನ ತಲ್ಲಣವೆಲ್ಲವೂ ಇಲ್ಲವಾಗುವುದಾದರೆ ಸಾವೇ ಬಂದುಬಿಡು

ಮೋಸದ ಕತ್ತಿ ಏಟಿಗೆ ನಂಬಿಕೆಯ ಕನ್ನಡಿ ಚೂರುಚೂರಾಗಿದೆ
ನನ್ನ ಕನಸೆಲ್ಲವೂ ಅಸುನೀಗುವುದಾದರೆ ಸಾವೇ ಬಂದುಬಿಡು

ಮತ್ತೆ ಮತ್ತೆ ಬೀಳುವ ಪೆಟ್ಟನ್ನು ಹೃದಯ ಎಷ್ಟು ಕಾಲ ತಡೆದೀತು
ನನ್ನ ಗಾಯವೆಲ್ಲವೂ ಮಾಯುವುದಾದರೆ ಸಾವೇ ಬಂದುಬಿಡು

ಬದುಕಲ್ಲದ ಬದುಕಲ್ಲಿ ಇಂದು ಜೀವಚ್ಛವವಾಗಿದ್ದಾಳೆ ಹೇಮ
ನನ್ನ ಚಿಂತೆಯೆಲ್ಲವೂ ಬೂದಿಯಾಗುವುದಾದರೆ ಸಾವೇ ಬಂದುಬಿಡು


                       ಎ. ಹೇಮಗಂಗಾ

Leave a Reply

Back To Top