ಕಾವ್ಯ ಸಂಗಾತಿ
ಗೊತ್ತಾಗಲೇ ಇಲ್ಲ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಗೆಳತಿ
ನೀನು ನಿನ್ನೆ ಮೊನ್ನೆ
ನನ್ನ ಕಿವಿಯಲ್ಲಿ
ಹೇಳಿದ್ದ ಪಿಸು ಮಾತು
ಭಾವವಾಗಿ
ಅಕ್ಷರ ರೂಪದ
ಕವನವಾಗಿದ್ದು ನನಗೆ
ಗೊತ್ತಾಗಲೇ ಇಲ್ಲ.
ಅಂದು ನೀನು
ಊರಿದ ಬೀಜ
ಇಂದು ಹೆಮ್ಮರವಾಗಿ
ರೆಂಬೆ ಕೊಂಬೆಗೆ
ಗಿಳಿ ಕೂತು
ತನ್ನೆಳಲು ತಂಪಿನಲಿ
ನಾವೀಗ ಕುಳಿತಿದ್ದು
ಗೊತ್ತಾಗಲೇ ಇಲ್ಲ.
ನಾನು ನೀನು
ಆಟವಾಡುತ್ತಾ
ಪೇರಿಸಿದ
ಕಲ್ಲು ಇಟ್ಟಿಗೆಗಳು
ಇಂದು ಭವ್ಯ
ಬಂಗಲೆಯಾಗಿ
ಬದುಕಿಗೆ ಸೂರಾಗಿದ್ದು
ನನಗೆ ಗೊತ್ತಾಗಲೇ ಇಲ್ಲ.
ಕಂಡ ಕನಸುಗಳೆಲ್ಲ
ಭಾವ ದಂಡಲಿ ಎದ್ದು
ಕಂಡ ಕಂಡಲ್ಲಿ
ನಗೆ ಸೂಸಿ
ಬಾಳಲಿ ಭರವಸೆ
ಮೂಡಿಸಿದ್ದು
ಗೆಳತಿ
ನನಗೆ ಗೊತ್ತಾಗಲೇ ಇಲ್ಲ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅದ್ಭುತ ಭಾವ ಪ್ರಜ್ಞೆ ತುಂಬಿದ ಕವನ ಸರ್
ಸುಂದರ ಮನೋಜ್ಞ ಕವನ ಸರ್
Amazing philosophical poem
ನೆನಪಿನ ಅಂಗಳದಿ ಭಾವಗಳ ಸುರಿಮಳೆ ಭಾವಪೂರ್ಣವಾದ ನೆನಪುಗಳು ಧನ್ಯವಾದಗಳು ಸರ್
ಏಷ್ಟು ಸುಂದರ ಭಾವ ಜೀವ ಕವನ ರಚಿಸಿ ದ್ದಿರಿ ಸರ್
ಒಂದೊಂದು ಸಲ ಗೊತ್ತಾಗುವುದೇ ಇಲ್ಲ….
ಭಾವಪೂರ್ಣವಾಗಿ ಹೊರಹೊಮ್ಮಿದ ಪ್ರೀತಿ ಮತ್ತು ಭರವಸೆಯ ಕವನ
ಧನ್ಯಳಾ ಗೆಳತಿ.. ಭಾವ ೂರ್ಣ.. ಒಲವಿನ ಕವಿತೆ
ಧನ್ಯಳಾ….ಗೆt
I
Dh
ಹೌದು…
ೌದು… ಕೆಲವೊಮ್ಮೆ ಗೊತ್ತಾಗುವು.ದೇ ಇಲ್ಲ.. ನಿಜ