ಡಾ.ಡೋ.ನಾ.ವೆಂಕಟೇಶ-ಕವಿತೆ ಧಾರಾವಾಹಿ

ಕಾವ್ಯ ಸಂಗಾತಿ

ಕವಿತೆ ಧಾರಾವಾಹಿ

ಡಾ.ಡೋ.ನಾ.ವೆಂಕಟೇಶ

ಕವಿತೆ ಧ್ವನಿಸ ಬೇಕು
ಹೊಸ ರಾಗ ರಂಜಿಸಿದಾಗ
ಕವಿತೆ ಉಲಿಯ ಬೇಕು
ಹಳೆ ರಾಗ ಮೆರೆದಾಗ

ಮತ್ತು ಆಗಾಗ
ಪೊರೆಯ ಬೇಕು
ತಲೆಚಪ್ಪಡಿಯ ಹುಳ
ಹೆಡೆ ಎತ್ತಿದಾಗ!

ಹಳೆ ಕಾಲದ ‘ಕಾದಲ್ ‘
ನಿಜ ಕಾಲದಲ್ಲಿ ‘ಪಾಗಲ್ ‘
ಇವೆಲ್ಲ
ಚರ್ವಿತ ಚರ್ವಣ

ಬದುಕಿನ ಕಾವ್ಯಕ್ಕೆ ನಮಿಸು
ಈ ಸೊಗಸಿಗೆ ನಮಿಸು ಈ
ಸೊಗಡಿಗೆ ಸಂತೈಸು!

ಇರುವಷ್ಟು ದಿನ ಇದ್ದುಬಿಡು
ನಿರ್ಭಿಡೆಯಿಂದ
ನಿರ್ಮೋಹದಿಂದ
ನಿರ್ಮಮಕಾರದಿಂದ!

ಅಪ್ಪ ಮುತ್ತಜ್ಜ
ಮಗ ಮರಿಮೊಮ್ಮಗ
ಬರೀ
ಕಥೆಯಷ್ಟೇ ಅಲ್ಲ
ಧಾರಾವಾಹಿ!

ವರ್ಡ್ಸ್ವರ್ಥರ ಕವಿತೆ
ಡ್ಯಾಫೊಡಿಲ್ಸ್ ಗಳಂತೆ
ಅರಳಿದಾಗಷ್ಟೆ ಹೂವು ,
ಕಾವು !
ಬೇರೆ ಬೇರೆ ಕಾಲಕ್ಕೆ
ಬೇರೆ ಬೇರೆ ಸಂಚಿಕೆ!

ಕವನೋದ್ಭವ ಅಲ್ಲ-
ಜೀವನಾನುಭವ
ಅದ್ಭುತ
ಅನಂತ
ಅಗಮ್ಯ


ಡಾ.ಡೋ.ನಾ.ವೆಂಕಟೇಶ

8 thoughts on “ಡಾ.ಡೋ.ನಾ.ವೆಂಕಟೇಶ-ಕವಿತೆ ಧಾರಾವಾಹಿ

  1. ಕವಿತೆ ಬರೆಯ ಬೇಕು,
    ಮನಸಿಗೆ ಮುದವಾದಾಗ.
    ಹಳೆಯದೆಲ್ಲ ದೂಳು ಕೊಡವಿ
    ಮೇಲೆತ್ತಿ ನೋಡ ಬೇಕು.
    ಹಳೆ ಬೇರು, ಹೊಸ ಚಿಗುರು
    ಇದೇ ಜೀವನದ ಬರಹ..

    1. ಸೂರ್ಯನ ಪ್ರಶಂಸೆ ಸೂರ್ಯ ಉದಯಿಸುವಷ್ಟೆ ಸತ್ಯ!
      Thanq Surya.

    1. Thanq Manjunath for your continued applauds.
      Enjoy the Divinity on that serene sacred place!

Leave a Reply

Back To Top