ರೋಹಿಣಿ ಯಾದವಾಡ- ಮಳೆ ಕುರಿತಾದ ತನಗಗಳು

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

ಮಳೆ ಕುರಿತಾದ ತನಗಗಳು

೧) ಉರಿ ಬಿಸಿಲ ತಾಪ
ಮಳೆರಾಯ ಬೇಡುವೆ
ತಣಿಸ ಬಾ ಹಣಿದು
ಕೃಪೆ ತೋರಿ ಸುರಿಸು.

೨) ಭೂವಿಯು ಕಾಯ್ದ ಹಂಚು
ತಣಿಸು ಬಾ ದಾಹವ
ತಡೆಯದು ಬಿಸಿಲು
ಬೀರಿದು ಬಿಡುವೆನು

೩) ಒಡಲು ಬರಿದಂತೆ
ಧರೆಗಿಳಿದು ಬಾರಾ
ಮಡಿಲ ತುಂಬಿಸಲು
ಇಳೆಯ ತಣಿಸಲು

೪) ಮಳೆಹನಿ ಸಿಂಚನ
ಮನಕದು ಪುಳಕ
ಸೃಷ್ಟಿಯ ಸೊಬಗಿಗೆ
ನಡೆದ ಸಂಚಲನ

೫) ಒಡಲು ಬರಿದಾಗಿ
ಭೂಮಿ ಬಿರುಕಾಗಿದೆ
ಜೀವಜಲಕ್ಕೆ ಕಾದು
ಬಳಲಿ ಬೆಂಡಾಗಿದೆ

೬) ಜೀವ ಸಂಕುಲ ಕಷ್ಟ
ಕೇಳದಿದ್ದರೆ ನಷ್ಟ
ಮಳೆಯಾಗ ಬೇಕಷ್ಟೆ
ಬದುಕಿ ಉಳಿಯಲು

೭) ಮಳೆಗೆ ಕಾದ ಇಳೆ
ಸುರಿಯಲು ಮಳೆ
ಹರಿಯಿತಲ್ಲ ಹೊಳೆ
ನಿಸರ್ಗಕ್ಕದು ಕಳೆ

೮) ಬೇಡುವೆ ವರ ತಾಯಿ
ಕೊಡುವೊಮ್ಮೆ ಮಳೆಯ
ಮರೆಯೆನು ನಿನ್ನೆಂದು
ಧನ್ಯತೆ ಭಾವದಲಿ.


Leave a Reply

Back To Top