ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ ರೇಮಾಸಂ

ಗಜಲ್

ಬದುಕು ಕಟ್ಟಲು ಸೋಲಿಗೆ ಹೆದರಿ ಜಯವನು ಬಿಡಲಾರೆ
ಭಾವಿ ಕಪ್ಪೆಯಂತೆ ಬೇಲಿ ಕಟ್ಟಿಕೊಂಡು ಭಯವನು ಪಡಲಾರೆ //

ದಾರಿ ದುರ್ಗಮವೆಂದು ಹಿಂದರಿದರೆ ಗಮ್ಯವ ಸೇರಬಹುದೆ
ಗುರಿ ಮುಟ್ಟಲು ನುಗ್ಗಬೇಕಲ್ಲ ತಡೆಗಳನು ನೋಡಲಾರೆ //

ಕ್ರೋಧ ಭಾವವು ಸುಡುತಿರೆ ಎದೆಯನು ಸಂತೈಸುವೆನು
ಹೃದಯದ ಮಾತು ಕೇಳದೆ ನಿರ್ಧಾರವನು ಮಾಡಲಾರೆ//

ಯೋಚಿಸಿ ರೂಪಿಸಿದ ಯೋಜನೆಯು ಫಲಪ್ರದವದು
ದೃಢತೆಯೆ ಗೆಲ್ಲುವದು ಅಸಾಧ್ಯ ರಾಗವನು ಹಾಡಲಾರೆ//

ಬಲವು ತಾಯಿ ತೋರಿದ ದಾರಿಯಲಿ ಕಂಡಿದೆಯಲ್ಲ
ಒಲವಿನ ಕಡಲಲಿ ಬೇಡದಾದ ಆಟವನು ಆಡಲಾರೆ//


About The Author

1 thought on “ಡಾ.ರೇಣುಕಾತಾಯಿ.ಸಂತಬಾರೇಮಾಸಂ-ಗಜಲ್”

Leave a Reply

You cannot copy content of this page

Scroll to Top