ಈರಮ್ಮ.ಪಿ.ಕುಂದಗೋಳ ಕವಿತೆ-ದೃಢ ಚಿತ್ತದ ನಗು

ಕಾವ್ಯ ಸಂಗಾತಿ

ಈರಮ್ಮ.ಪಿ.ಕುಂದಗೋಳ

ದೃಢ ಚಿತ್ತದ ನಗು

ದಿನ ಸಾಯುವವರಿಗೆ ಆಳುವವರು ಯಾರು?
ಸೊಪ್ಪೆ ಮುಖಮಾಡಿಕೊಂಡು ಕುಳಿತರೆ ಯಾರು ಕೇಳರು?

ಇಲ್ಲಿ ಯಾರಿಗೆ ಯಾರು ಇಲ್ಲ ನಿನಗೆ ನೀನೇ ಎಲ್ಲಾ
ಹೊಸಕಿಬಿಡು ಚಿಂತೆ ಬರುವ ದಾರಿ ನೂರು ನಗುವಲ್ಲೇ ಅಡಗಿದೆ ಎಲ್ಲಾ!

ಮಲ್ಲಿಗೆ ಮೊಗ್ಗು ಹೂವಾಗಿ ಅರಳಿ ನೆಮ್ಮದಿಯಿಂದ ದಿನ ಕಳೆದು ಹೋಗುವುದು,
ಮನುಷ್ಯನು ಹಾಗೆ ಬರುವ ನೋವು ಸಹಿಸಿಕೊಂಡು
ಗಟ್ಟಿಯಾಗಿ ಬಾಳುವುದು!

ಅದೇಕೆ ಕೆಟ್ಟ ಘಳಿಗೆಯ ನೆನೆದು ಸಂತಸಸ ಕ್ಷಣ ಮರೆಮಾಚುವೆ,
ಕಷ್ಟವ ಪ್ರೀತಿಸು ನೆಮ್ಮದಿಯ ತಾಣದಲ್ಲಿ ನಿಲ್ಲುವೆ !

ಬದುಕಿನಯಾನದ ಪಯಣದಲ್ಲಿ ಸಾವಿರ ಸಾವಿರ ಉರುಳು ಬರುವುದು ಸಹಜ,
ಮಂದಹಾಸದಿ ದೃಢ ಚಿತ್ತದಿಂದ ಕಾದು ನಲಿಯುವುದು
ನಿಜವಾದ ಮನುಜ!

ಸ್ಮಿತದಿಂದ ಕೂಡಿದ ಮುಗುಳು ನಗೆ ಅರಳು ನಗೆಯಾಗಿ ಅರಳುವುದು,
ಕಣ್ಣ ಕಾಂತಿಯ ಚೆಲುವಲ್ಲಿ ದುಂಬಿಯು ಕುಣಿದಂತೆ
ಕಾಣುವುದು!

ನಿನಗೆ ನೀನೇ ಸ್ಫೂರ್ತಿ ನಿನ್ನ ಅಗಾಧತೆಯೇ ನಿನಗೆ ಶಕ್ರಿ,
ಸತತ ಪರಿಶ್ರಮವೇ ನಿನಗೆ ಯಶಸ್ಸು ಕೀರ್ತಿ!

ಪ್ರೀತಿಯ ಜೊತೆಯಲಿ ನಂಬಿಕೆಯಿಂದ ಬಹುದೂರ ಸಾಗಿ,
ಸಕ್ಕರೆಯ ಸಿಹಿ ಜೇನಿನಂತೆ ಆತ್ಮವಿಶ್ವಾಸದಿಂದ ಬಾಳಿ!


2 thoughts on “ಈರಮ್ಮ.ಪಿ.ಕುಂದಗೋಳ ಕವಿತೆ-ದೃಢ ಚಿತ್ತದ ನಗು

Leave a Reply

Back To Top